ರಾಜಸ್ತಾನದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮುಂಬೈನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಲಿವ್ ಇನ್ ರಿಲೇಷನ್ ಸಂಗಾತಿಯೇ ಹತ್ಯೆ ಮಾಡಿರೋದಾಗಿ ಆರೋಪಿಸಲಾಗಿದೆ.
ಕೋಪರ್ ಖೇರಾನ್ ಪ್ರದೇಶದ ತನ್ನ ಮನೆಯಿಂದ ಕಾಣೆಯಾದ ನಾಲ್ಕು ದಿನಗಳ ನಂತರ 27 ವರ್ಷದ ಮಹಿಳೆಯ ಶವವು ನವಿ ಮುಂಬೈನಲ್ಲಿ ಶನಿವಾರ ಪತ್ತೆಯಾಗಿದೆ.
ಮೃತರನ್ನು ಉರ್ವಿ ವೈಷ್ಣವ್ ಎಂದು ಗುರುತಿಸಲಾಗಿದೆ. ರಾಜಸ್ಥಾನದ ಬುಂಡಿ ನಿವಾಸಿಯಾಗಿದ್ದು, ಕಳೆದ 6 – 7 ವರ್ಷಗಳಿಂದ ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು.
ಮಹಿಳೆಯ ಲಿವ್ ಇನ್ ಪಾರ್ಟನರ್ ಆಕೆಯನ್ನು ಕೊಂದಿದ್ದಾನೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. ಸುಮಾರು 7 ತಿಂಗಳ ಹಿಂದೆ ಉರ್ವಿ, ರಿಯಾಜ್ ಖಾನ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಮತ್ತು ಅವರು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಉರ್ವಿಯ ಇಬ್ಬರು ಸಹೋದರರು ಸಹ ಉರ್ವಿ ವಾಸಿಸುತ್ತಿದ್ದ ಪ್ರದೇಶದ ಹತ್ತಿರದಲ್ಲೇ ವಾಸಿಸುತ್ತಿದ್ದರು.
ಡಿಸೆಂಬರ್ 13 ರಂದು ರಿಯಾಜ್ ಉರ್ವಿಯನ್ನು ಹೋಟೆಲ್‌ಗೆ ಡ್ರಾಪ್ ಮಾಡಿದ ನಂತರ ಅವಳು ವಾಪಸ್ ಬರಲಿಲ್ಲ. ಆಕೆಯ ಸಹೋದರರು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರು ಆದರೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ನೆರೂಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಡಿಸೆಂಬರ್ 17 ರಂದು ಉರ್ವಿ ಶವ ಕಾಲುವೆ ಬಳಿ ಬಿದ್ದಿತ್ತು. ಮೃತದೇಹವನ್ನು ನಾನಾ ಸಾಹಿಬ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಉರ್ವಿಯ ಕುಟುಂಬದವರು ಆಕೆಯ ಲಿವ್ ಇನ್ ಪಾಲುದಾರ ರಿಯಾಜ್ ಅವರನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಘಟನೆಯ ನಂತರ ಅವನು ಕೂಡ ಎರಡು ದಿನ ನಾಪತ್ತೆಯಾಗಿದ್ದಾನೆ ಎಂದು ಹೇಳಿದ್ದಾರೆ.
ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಎಸೆದಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಕುಟುಂಬದವರು ಆಗ್ರಹಿಸಿದ್ದಾರೆ.