ಜೈಪುರ: ರೈತರಿಗೆ ಒಂದೇ ಸೂರಿನಡಿ ಕೃಷಿಗೆ ಸಂಬಂಧಿಸಿದ ಎಲ್ಲಾ ಸೇವೆ ಒದಗಿಸುವ 1.25 ಲಕ್ಷ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯ 14ನೇ 2000 ರೂ.ಗಳನ್ನು ಕೂಡ ಇದೇ ಸಂದರ್ಭದಲ್ಲಿ ಪ್ರಧಾನಿ ಬಿಡುಗಡೆ ಮಾಡಿದರು. ಸಲ್ಫರ್ ಲೇಪಿತ ಯೂರಿಯಾ ಗೋಲ್ಡ್ ರಸಗೊಬ್ಬರ ಬಿಡುಗಡೆ ಮಾಡಿದರು.
ರೈತರಿಗೆ ಸಕಲ ಸೌಲಭ್ಯಗಳನ್ನು ಒದಗಿಸುವ ಏಕಗವಾಕ್ಷಿ ಕೇಂದ್ರಗಳಾಗಿರುವ ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ರಸಗೊಬ್ಬರ, ಬೀಜ ಸೇರಿ ಕೃಷಿ ಚಟುವಟಿಕೆ ಸಂಬಂಧಿಸಿದ ಅನೇಕ ಸಲಕರಣೆಗಳು, ಸೌಲಭ್ಯಗಳು ಲಭಿಸುತ್ತದೆ. ಅಲ್ಲದೇ, ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ಸರ್ಕಾರದ ವಿವಿಧ ಕೃಷಿ ಸಂಬಂಧಿ ಯೋಜನೆಗಳಿಗೆ ಅರ್ಜಿ ಕೂಡ ಸಲ್ಲಿಸಬಹುದಾಗಿದೆ.