ರೇಪ್ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂದು ಕೆಲ ತಿಂಗಳುಗಳ ಹಿಂದೆ ರಮೇಶ್ ಕುಮಾರ್ ನೀಡಿದ್ದ ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಇಂತಹದ್ದೇ ಹೇಳಿಕಯೊಂದನ್ನು ರಾಜಸ್ಥಾನದ ಕಾಂಗ್ರೆಸ್ ಸಚಿವ ನೀಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಜೆಟ್ ಅಧಿವೇಶನದಿಂದ ಇಬ್ಬರು ಬಿಜೆಪಿ ಶಾಸಕರು ಅಮಾನತು
ಬುಧವಾರ ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ, ರಾಜಸ್ಥಾನದ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್, ರಾಜ್ಯವು ಅತ್ಯಾಚಾರ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ, ಅದರಲ್ಲಿ ಸಂಶಯವಿಲ್ಲ. ನಾವೇಕೆ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿದ್ದೇವೆ ಎಂದರೆ, ರಾಜಸ್ಥಾನವು ಪುರುಷರ ರಾಜ್ಯ(ಮರ್ದೋ ಕಾ ಪ್ರದೇಶ್) ಹಾಗಾಗಿ ಎಂದರು. ಧರಿವಾಲ್ ಅವರ ಈ ಹೇಳಿಕೆಗೆ ಸಭೆಯಲ್ಲಿದ್ದವರು ಸಹ ನಕ್ಕು ಸುಮ್ಮನಾದರು.
ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಕುರಿತ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
ಆದರೆ ಆಡಳಿತರೂಢ ಸರ್ಕಾರದ ಸಚಿವರೊಬ್ಬರ ಇಂತಹ ಹೇಳಿಕೆ, ರಾಜ್ಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸೇರಿದಂತೆ ಮಹಿಳಾ ಆಯೋಗ ಕೂಡ ಸಚಿವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಧರಿವಾಲ್ ಅವರ ಈ ಹೇಳಿಕೆಯ ಕ್ಲಿಪ್ ಹಂಚಿಕೊಂಡಿರುವ, ರಾಜ್ಯ ಬಿಜೆಪಿ ಮುಖ್ಯಸ್ಥ ಸತೀಶ್ ಪುನಿಯಾ ಹಾಗೂ ವಕ್ತಾರ ಶೆಹಜಾದ್ ಇದು ಆಘಾತಕಾರಿ ವಿಷಯ ಹೌದು ಆದರೆ ಕಾಂಗ್ರೆಸ್ಸಿಗರಿಂದ ಇಂತಹ ಹೇಳಿಕೆ ನಿರೀಕ್ಷಿಸುವುದು ಆಶ್ಚರ್ಯಕರವಲ್ಲ. ಇಂತಹವರು ಅತ್ಯಾಚಾರವನ್ನು ಖಂಡಿಸುವ ಬದಲು, ಈ ರೀತಿಯ ಹೇಳಿಕೆ ನೀಡಿ ಪ್ರೇರೆಪಿಸುತ್ತಿದ್ದಾರೆ. ಆದರೂ ಪ್ರಿಯಾಂಕ ವಾದ್ರ ಸುಮ್ಮನಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.