ದಲಿತ ಸಮುದಾಯದ ಕುಟುಂಬವೊಂದು ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದು ಮನೆ ತುಂಬಿಸಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್ ಜಿಲ್ಲೆಯಲ್ಲಿ ಘಟಿಸಿದೆ.
ಕುದುರೆಯೇರಿಕೊಂಡು ಬಂದ ಕಾರಣಕ್ಕೆ ದಲಿತ ವರರ ಮೇಲೆ ಹಲ್ಲೆ ನಡೆದ ಅಮಾನವೀಯ ಘಟನೆಗಳ ಬೆನ್ನಿಗೇ ಹೀಗೊಂದು ಮಹತ್ವದ ಬೆಳವಣಿಗೆ ಸದ್ದು ಮಾಡುತ್ತಿದೆ.
ಮೊದಲಿಗೆ ಬಾಡಿಗೆ ಪಡೆದಿದ್ದ ಹೆಲಿಕಾಪ್ಟರ್ ಅನ್ನು ಕೊನೆ ಕ್ಷಣದಲ್ಲಿ ಹಾರಿಸಲು ಹಿಂದೇಟು ಹಾಕಿದ್ದರಿಂದಾಗಿ, ಇನ್ನೂ ಒಂದು ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಿ ಗಂಡಿನ ಕುಟುಂಬ ಮತ್ತೊಂದು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಂಡಿತ್ತು. ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆಯಿಸಿಕೊಳ್ಳುವುದು ಮದುಮಗಳ ಅತ್ತೆಯ ಆಸೆಯಾಗಿತ್ತಂತೆ.
ದುಡುಕಿನ ನಿರ್ಧಾರ ಕೈಗೊಂಡ ಇಂಜಿನಿಯರ್; ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ
ಮಂಗಳವಾರ ರಾತ್ರಿ, ದಲಿತ ವ್ಯಕ್ತಿ ತರುಣ್ ಮೇಘ್ವಾಲ್ ಪಾಕಿಸ್ತಾನ ಗಡಿಗೆ ಹತ್ತಿರದಲ್ಲಿರುವ ಭಿದಾನಿಯೋಂಕಿ ಧಾನಿ ಎಂಬ ಊರಿನ ಧಿಯಾರನ್ನು ಮದುವೆಯಾಗಿದ್ದರು. ಇದರ ಮಾರನೇ ದಿನ ಮದುಮಕ್ಕಳು ಜಸೇಧಾರ್ ಧಾಮ ಎಂಬ ಊರನ್ನು ಹೆಲಿಕಾಪ್ಟರ್ ಮೂಲಕ ತಲುಪಿದ್ದರು.
ಹೆಲಿಕಾಪ್ಟರ್ ಗ್ರಾಮದ ನೆತ್ತಿ ಮೇಲೆ ಹಾರಾಡುತ್ತಿದ್ದಂತೆಯೇ ಊರಿನ ಮಂದಿ ಲ್ಯಾಂಡ್ ಆಗಲು ಬಿಡದೇ ಇದ್ದ ಕಾರಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಜನಜಂಗುಳಿಯನ್ನು ನಿಯಂತ್ರಿಸಬೇಕಾಗಿ ಬಂತು.