ರಾಜಸ್ಥಾನದ ಭರತ್ ಪುರ ಜಿಲ್ಲೆಯ ವ್ಯಕ್ತಿಯೊಬ್ಬ 3 ಲಕ್ಷ ರೂಪಾಯಿ ಕೊಟ್ಟು ಮದುವೆಯಾಗಿದ್ದ ಮಹಿಳೆ ಮದುವೆಯಾದ 13 ದಿನಗಳ ನಂತರ ಬೇರೆ ಪುರುಷನೊಂದಿಗೆ ಪರಾರಿಯಾಗಿದ್ದಾಳೆ.
ಕಂಗಾಲಾದ ಪತಿರಾಯ ಪೊಲೀಸರಿಗೆ ದೂರು ನೀಡಿದ್ದಾನೆ. ಭರತ್ ಪುರ ಜಿಲ್ಲೆಯ ಬಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮದರ್ ಗ್ರಾಮದ ನಾರಾಯಣ ಸಿಂಗ್ ಗುರ್ಜರ್ ಈ ಕುರಿತು ದೂರು ನೀಡಿದ್ದಾರೆ.
ಯುವತಿ ತಂದೆಗೆ ಮಧ್ಯವರ್ತಿಯ ಮೂಲಕ 3 ಲಕ್ಷ ರೂಪಾಯಿ ಹಣ ಕೊಟ್ಟು ಮದುವೆ ಮಾಡಿಕೊಳ್ಳಲಾಗಿತ್ತು. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಗೆ ಸೇರಿದ ಪತ್ನಿ ಮದುವೆಯಾದ 13 ದಿನಗಳ ನಂತರ ಬೇರೆ ವ್ಯಕ್ತಿಯೊಂದಿಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಘಟಿಗಾಂವ್ ಪ್ರದೇಶದ ನಿವಾಸಿ ರಾಮದಾನ್ ಗೂರ್ಜಾರ್ ಅವರ ಸಹೋದರಿ ಸುನಿತಾ ಮದುವೆಯಾಗಲು 3 ಲಕ್ಷ ರೂಪಾಯಿ ಕೊಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.