alex Certify ಸೆರಗಿನಿಂದ ಪತ್ನಿ ಮುಖ ಮುಚ್ಚಿಕೊಂಡಿಲ್ಲವೆಂಬ ಕಾರಣಕ್ಕೆ ಮಗು ಹತ್ಯೆಗೈದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆರಗಿನಿಂದ ಪತ್ನಿ ಮುಖ ಮುಚ್ಚಿಕೊಂಡಿಲ್ಲವೆಂಬ ಕಾರಣಕ್ಕೆ ಮಗು ಹತ್ಯೆಗೈದ ಪತಿ

ಪತ್ನಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತಿ ಪತ್ನಿಯ ತೋಳಿನಲ್ಲಿದ್ದ ಮೂರು ವರ್ಷದ ಮಗುವನ್ನು ಎಸೆದು ಸಾಯಿಸಿದ ದಾರುಣ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಸಂಭವಿಸಿದೆ. ಮಗು ಸಾವನ್ನಪ್ಪಿದ ಬಳಿಕ ಆರೋಪಿ ಹಾಗೂ ಕುಟುಂಬಸ್ಥರು ರಹಸ್ಯವಾಗಿ ಮಗುವಿನ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಈ ಸಂಬಂಧ ಮಹಿಳೆ ಮೋನಿಕಾ ಯಾದವ್​​ ತಮ್ಮ ಪೋಷಕರ ಜೊತೆ ಸೇರಿ ಬೆಹ್ರೋರ್​​ ಪೊಲೀಸ್​ ಠಾಣೆಯಲ್ಲಿ ಬುಧವಾರ ದೂರನ್ನು ದಾಖಲಿಸಿದ್ದಾರೆ.
ನಾನು ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿಲ್ಲ ಎಂಬ ಕಾರಣಕ್ಕೆ ನನ್ನ ಪತಿ ಪ್ರದೀಪ್​ ಯಾದವ್​ ಸಿಟ್ಟಾಗಿದ್ದರು. ಇದರಿಂದ ನಮ್ಮಿಬ್ಬರ ನಡುವೆ ವಾದ ಏರ್ಪಟ್ಟಿತ್ತು. ಕೋಪಗೊಂಡಿದ್ದ ಪ್ರದೀಪ್​​ ನನ್ನ ಕೈಲಿದ್ದ ಮಗುವನ್ನು ಕಸಿದುಕೊಂಡು ಕೋಣೆಯ ಹೊರಗೆ ಎಸೆದಿದ್ದಾರೆ. ಇದರಿಂದ ಮಗು ಸಾವನ್ನಪ್ಪಿದೆ ಎಂದು ಮೋನಿಕಾ ಆರೋಪಿಸಿದ್ದಾರೆ.

ಅಲ್ಲದೇ ಆರೋಪಿ ಹಾಗೂ ಆತನ ಕುಟುಂಬಸ್ಥರು ರಹಸ್ಯವಾಗಿ ಮಗಳ ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದಾರೆ ಎಂದು ಮೋನಿಕಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಇನ್ನು ಪ್ರಕರಣ ಸಂಬಂಧ ಮಾತನಾಡಿದ ಪೊಲೀಸ್​ ಅಧಿಕಾರಿ, ಮಹಿಳೆಯು ನೀಡಿರುವ ಮಾಹಿತಿಯ ಪ್ರಕಾರ ಆಕೆಯ ಪತಿ ಆಕೆಗೆ ಯಾವಾಗಲು ಸೆರಗಿನಿಂದ ಮುಖ ಮುಚ್ಚಿಕೊಂಡಿರುವಂತೆ ಹೇಳುತ್ತಿದ್ದ. ಇದೇ ಕಾರಣಕ್ಕಾಗಿ ಮಂಗಳವಾರ ಕೂಡ ದಂಪತಿ ನಡುವೆ ಕಲಹ ಏರ್ಪಟ್ಟಿತ್ತು. ಇದಾದ ಬಳಿಕ ಆತ ಮಗುವಿನ ಕೆನ್ನೆಗೆ ಬಾರಿಸಿದ್ದಾನೆ. ಇದಕ್ಕೆ ಪತ್ನಿ ವಿರೋಧ ಮಾಡುತ್ತಿದ್ದಂತೆಯೇ ಆತ ಮಗಳನ್ನು ನೆಲಕ್ಕೆ ಬಿಸಾಡಿದ್ದಾನೆ. ಇದರಿಂದ ಮಗು ಸಾವನ್ನಪ್ಪಿದೆ ಎಂದು ಹೇಳಿದ್ರು.

ಪ್ರಸ್ತುತ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ. ಮಾತ್ರವಲ್ಲದೇ ಶವಸಂಸ್ಕಾರದಲ್ಲಿ ಭಾಗಿಯಾಗಿದ್ದವರನ್ನೂ ಹುಡುಕಲಾಗುತ್ತಿದೆ ಎಂದು ಬೆಹ್ರೋರ್​​ ಪೊಲೀಸ್ ಠಾಣೆ ಎಸ್​ಹೆಚ್​ಓ ಪ್ರೇಮ್​ ಪ್ರಕಾಶ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...