ಜೈಪುರದ ಮಾನಸರೋವರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಥಾರ್ ಜೀಪ್‌ನಲ್ಲಿ ಬಂದ ಕಿಡಿಗೇಡಿಗಳು ದಂಪತಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಯುವಕನಿಗೆ ಥಳಿಸಿದ್ದಾರೆ. ಥಾರ್‌ನಲ್ಲಿ ಕುಳಿತಿದ್ದ ಕಿಡಿಗೇಡಿಗಳು ದಂಪತಿಗೆ ಅಸಭ್ಯ ಸೂಚನೆಗಳನ್ನು ನೀಡಿ ಹೊರಟು ಹೋಗಿದ್ದು, ದಂಪತಿ ಅದನ್ನು ನಿರ್ಲಕ್ಷಿಸಿದ್ದರು. ಆದರೆ ಥಾರ್‌ನಲ್ಲಿದ್ದ ವ್ಯಕ್ತಿ ವಾಪಸ್ ಬಂದು ಯುವಕನಿಗೆ ಮನಬಂದಂತೆ ಥಳಿಸಲು ಪ್ರಾರಂಭಿಸಿದ್ದಾನೆ. ಈ ಘಟನೆ ಧನ್ವಂತರಿ ಆಸ್ಪತ್ರೆ ಬಳಿ ರಾತ್ರಿ 10:45 ರ ಸುಮಾರಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದು ದಂಪತಿಗೆ ತುಂಬಾ ನೋವುಂಟು ಮಾಡಿತು ಮತ್ತು ಯುವಕ ಅಸಹಾಯಕನಾಗಿ ನಿಂತಿದ್ದ. ದಂಪತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಪ್ರಯತ್ನಿಸಿದರಾದರೂ ಹಲವು ಬಾರಿ ಕರೆ ಮಾಡಿದರೂ ಪೊಲೀಸರು ಸ್ಪಂದಿಸಲಿಲ್ಲ. ಈ ಮಧ್ಯೆ, ಯುವತಿಯು ಧೈರ್ಯದಿಂದ ಕಿಡಿಗೇಡಿಗಳೊಂದಿಗೆ ವಾಗ್ವಾದಕ್ಕೆ ಇಳಿದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. “ನಿಮ್ಮ ಮನೆಯಲ್ಲಿ ತಾಯಿ-ಸಹೋದರಿ ಇಲ್ವಾ?” ಎಂದು ಕಿಡಿಗೇಡಿಗಳನ್ನು ಪ್ರಶ್ನಿಸಿದ್ದಾಳೆ.
ಈ ಘಟನೆಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಈ ಘಟನೆಯನ್ನು ಖಂಡಿಸುತ್ತಿದ್ದಾರೆ ಮತ್ತು ಜೈಪುರ ಪೊಲೀಸರು ಈ ಹುಡುಗರನ್ನು ಗುರುತಿಸಿ ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. “ಈ ಹುಡುಗರಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಇಂತಹ ದುಷ್ಕೃತ್ಯಗಳು ಜೈಪುರದಂತಹ ಅಂತಾರಾಷ್ಟ್ರೀಯ ಗುರುತನ್ನು ಹೊಂದಿರುವ ನಗರಕ್ಕೆ ಕಳಂಕ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.
यह जयपुर है…
थार में बैठे लड़कों ने कपल को मिडल फ़िंगर दिखाई। फिर भी बाइक वाला लड़का कुछ नहीं बोला। थार वालों ने कपल के आगे थार गाड़ी लगा दी और लड़के को जमकर पीटा। घटना 10:45 पर मानसरोवर के धन्वंतरि हॉस्पिटल के पास की है। पुलिस को कई फोन किए मगर लगे नहीं !
मनचलों से उलझ रही यह… pic.twitter.com/Kk6n7Gojg0— Arvind Chotia (@arvindchotia) February 15, 2025