alex Certify ಮದುವೆಯಾದ ನಾಲ್ಕೇ ದಿನಕ್ಕೇ ಬಿಗ್ ಶಾಕ್: ಹಣವೂ ಇಲ್ಲ, ಹೆಂಡ್ತಿಯೂ ಇಲ್ಲದೇ ವರ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ನಾಲ್ಕೇ ದಿನಕ್ಕೇ ಬಿಗ್ ಶಾಕ್: ಹಣವೂ ಇಲ್ಲ, ಹೆಂಡ್ತಿಯೂ ಇಲ್ಲದೇ ವರ ಕಂಗಾಲು

ಜೋಧ್ ಪುರ: ರಾಜಸ್ತಾನದ ಜೋಧ್ ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಮದುವೆಯಾಗಲು ನೋಡಿದ್ದ ಹುಡುಗಿಯೇ ಬೇರೆ, ತಾಳಿಕಟ್ಟಿದ ಹುಡುಗಿಯೇ ಬೇರೆ. ಕೊನೆಗೆ ಮದುವೆಯಾದವಳು ಕೂಡ ಸಿಗದೇ, ಹಣ ಕಳೆದುಕೊಂಡ ವರ ಕಂಗಾಲಾಗಿದ್ದಾನೆ.

ಜೋಧ್ ಪುರದ ನಾಗಔರ್ ನ ಕೆಲವು ಜನರೊಂದಿಗೆ ಗಂಗಾ ಸಿಂಗ್ ಎಂಬಾತ ಉಮೈದ್ ಸಿಂಗ್(20) ಮನೆಗೆ ಬಂದಿದ್ದು, ನಮ್ಮ ಸಂಬಂಧದಲ್ಲಿ ಒಳ್ಳೆ ಹುಡುಗಿ ಇದ್ದಾಳೆ. ಅವಳೊಂದಿಗೆ ಮದುವೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದು, ಆತನ ಮಾತನ್ನು ನಂಬಿದ ಉಮೈದ್ ಸಿಂಗ್ ತನ್ನ ಸಹೋದರ ಮತ್ತು ಮಾವನೊಂದಿಗೆ ಹುಡುಗಿ ನೋಡಲು ಹೋಗಿದ್ದಾನೆ.

ಸಂಪ್ರದಾಯದ ಪ್ರಕಾರ, ಹುಡುಗಿ ನೋಡಲು 500 ರೂ. ಕೊಟ್ಟು ಹುಡುಗಿ ನೋಡಿದ್ದಾನೆ. ಈ ವೇಳೆ ಗಂಗಾ ಸಿಂಗ್ ಹುಡುಗಿಯ ಕುಟುಂಬದವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಮದುವೆಯ ಎಲ್ಲ ಖರ್ಚು, ವೆಚ್ಚಗಳನ್ನು ನೀವೇ ಭರಿಸಬೇಕೆಂದು 3.5 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನೆ.

ಡಿಸೆಂಬರ್ 7 ರಂದು ಉಮೈದ್ ಸಿಂಗ್ ಸಂಬಂಧಿಕರೊಂದಿಗೆ ನಾಗೌರ್ ನಲ್ಲಿರುವ ಹುಡುಗಿ ಮದುವೆಯಾಗಲು ಹೊರಟಿದ್ದಾಗ ಗಂಗಾ ಸಿಂಗ್ ಮತ್ತೆ 2 ಲಕ್ಷ ರೂ. ಪಡೆದುಕೊಂಡು ಡಿಸೆಂಬರ್ 11 ರಂದು ಮದುವೆಗೆ ಊರಿಗೆ ಬರುವಂತೆ ಹೇಳಿದ್ದಾನೆ. ಆತನ ಮಾತು ನಂಬಿದ ಉಮೈದ್ ಸಿಂಗ್ ಡಿಸೆಂಬರ್ 11 ರಂದು ಸಂಜೆ ಮದುವೆಗೆ ಸಜ್ಜಾಗಿ ಬಂಧು ಬಾಂಧವರೊಂದಿಗೆ ನಾಗೌರ್ ತಲುಪಿದ್ದು, ಅವರನ್ನು ಊರ ಹೊರಗೆ ನಿಲ್ಲಿಸಿದ ಗಂಗಾ ಸಿಂಗ್ ಹುಡುಗಿ ಮನೆಯಲ್ಲಿ ಸಂಬಂಧಿ ಮೃತಪಟ್ಟಿದ್ದಾರೆ ಎಂದು ಪಕ್ಕದ ಗ್ರಾಮ ಮ್ಯಾಂಗಲೋಡ್ ಗೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಏನೇನೋ ಹೇಳಿ ಮತ್ತೆ 50 ಸಾವಿರ ರೂಪಾಯಿ ಹಣ ಪಡೆದುಕೊಂಡು ಬೇರೆ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದಾನೆ. ಮೊದಲು ನೋಡಿದ್ದ ಹುಡುಗಿ ಬದಲಿಗೆ ಬೇರೆ ಹುಡುಗಿ ಇರುವುದನ್ನು ಗಮನಿಸಿದ ಉಮೈದ್ ಸಿಂಗ್ ಪ್ರಶ್ನಿಸಿದ್ದಾನೆ. ಕೊನೆಗೆ ಏನೇನೋ ಹೇಳಿ ಗಂಗಾ ಸಿಂಗ್ ಒಪ್ಪಿಸಿದ್ದು, ಬೇರೆ ಹುಡುಗಿಯನ್ನೇ ಮದುವೆಯಾಗಿದ್ದಾನೆ.

ಎರಡು ದಿನಗಳ ನಂತರ ಪತ್ನಿಯನ್ನು ಕರೆದುಕೊಂಡು ಹೋಗಲು ಉಮೈದ್ ಸಿಂಗ್ ತಾನೇ ಕೊಡಿಸಿದ್ದ ಮೊಭಯ್ಲ ಗೆ ಕರೆ ಮಾಡಿದಾಗ ಆಕೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಗಂಗಾ ಸಿಂಗ್ ನಿಮ್ಮಿಂದ ಹಣ ಪಡೆದು ಮೋಸ ಮಾಡಿದ್ದಾನೆ. ನಾನು ಅಡುಗೆ ಕೆಲಸಕ್ಕೆ ಬಂದ ಮಹಿಳೆಯಾಗಿದ್ದು, ನನಗೆ ಬೆದರಿಕೆ ಹಾಕಿ ನಿಮ್ಮೊಂದಿಗೆ ಮದುವೆ ಮಾಡಲಾಗಿದೆ. ಜೀವಭಯದಿಂದ ನಿಮ್ಮೊಂದಿಗೆ ಮದುವೆಯಾಗಿದ್ದೇನೆ ಎಂದು ಆಕೆ ತಿಳಿಸಿದ್ದಾಳೆ. ಆಕೆಯ ಮಾತಿನಿಂದ ಶಾಕ್ ಆದ ಉಮೈದ್ ಸಿಂಗ್ ಅತ್ತ 10 ಲಕ್ಷ ಹಣವೂ ಇಲ್ಲದೆ, ಇತ್ತ ಪತ್ನಿಯೂ ಇಲ್ಲದೆ ಕಂಗಾಲಾಗಿದ್ದು, ಮೋಸ ಮಾಡಿದ ಗಂಗಾ ಸಿಂಗ್ ವಿರುದ್ಧ ದೂರು ನೀಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...