ರಾಜಸ್ಥಾನದ ಡೀಗ್ನ ದಿವಾಹಿ ಗ್ರಾಮದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಯುವಕನೊಬ್ಬ ಬಸ್ ಚಾಲಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ತನ್ನ ಗ್ರಾಮದ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಆತನ ಬೆರಳನ್ನು ಕತ್ತರಿಸಿದ್ದಾನೆ.
ಈ ಘಟನೆಯಲ್ಲಿ ಆರೋಪಿ ಯುವಕನ ಜೊತೆ ಆತನ ಸಹಚರನೂ ಶಾಮೀಲಾಗಿದ್ದಾನೆ. ಟಿಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯ ಜಸಾನಾ ಗ್ರಾಮದ ಮುಂದೆ ಈ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ಎರಡು ಸಿಸಿ ಟಿವಿ ವಿಡಿಯೋಗಳು ಹೊರಬಂದಿದ್ದು, ಮೊದಲ ವಿಡಿಯೋದಲ್ಲಿ, ಯುವಕ ಜಗಳವಾಡುತ್ತಿರುವುದು ಕಂಡುಬಂದರೆ, ಎರಡನೇ ವಿಡಿಯೋದಲ್ಲಿ, ಯುವಕ ಮತ್ತು ಆತನ ಸಹಚರ ಕತ್ತಿಯನ್ನು ಹಿಡಿದುಕೊಂಡು ಬಸ್ ಚಾಲಕನನ್ನು ಹೊಡೆಯುತ್ತಿರುವುದು ಸೆರೆಯಾಗಿದೆ.
ಗಾಯಗೊಂಡ ಚಾಲಕನನ್ನು ಕೂಡಲೇ ಬಲ್ಲಭಗಢ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಬಳಿಕ ಏಮ್ಸ್ಗೆ ಕಳುಹಿಸಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ನಗರ ಬಸ್ ಚಾಲಕರು ಬುಧವಾರ ಬೆಳಿಗ್ಗೆ ಮುಷ್ಕರಕ್ಕೆ ಕರೆ ನೀಡಿದ್ದರು.
गांव के पास बस नहीं रोकी तो तलवार से काट दी बस ड्राइवर की उंगली विरोध में सिटी बस ड्राइवरों ने सुबह छह बजे से 10 बजे तक नहीं चलाई बसें@JagranNews@Faridabad@FBDPolice pic.twitter.com/GXA9FDaaxQ
— Abhishek Tiwari (@abhishe_tiwary) February 5, 2025