
ರಾಜಸ್ತಾನದ ಬಾರಾದ ಕೆಲ್ವಾರಾ ಕೋವಿಡ್ ಕೇರ್ ಸೆಂಟರ್ ನಲ್ಲಿ ಪಿಪಿಇ(ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್ಮೆಂಟ್) ಕಿಟ್ ಧರಿಸಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಮದುವೆ ದಿನವೇ ವಧುವಿಗೆ ಕೊರೋನಾ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಈ ರೀತಿ ಮದುವೆ ಮಾಡಲಾಗಿದೆ. ವಧುವಿನೊಂದಿಗೆ ವರ ಕೂಡ ಪಿಪಿಇ ಕಿಟ್ ಧರಿಸಿ ಕೋವಿಡ್ ಸೆಂಟರ್ ನಲ್ಲಿಯೇ ಮದುವೆಯಾಗಿದ್ದಾನೆ. ಅರ್ಚಕನನ್ನು ಹೊರತುಪಡಿಸಿ ಒಬ್ಬ ವ್ಯಕ್ತಿಯ ಸಮ್ಮುಖದಲ್ಲಿ ಮದುವೆ ನಡೆದಿದೆ. ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆ.
ಮದುವೆ ಕಾರ್ಯಗಳು ಜರುಗುವ ವೇಳೆಯಲ್ಲಿ ಜೋಡಿ ಪಿಪಿಇ ಸೂಟ್ ನಲ್ಲಿ ಕಾಣಿಸಿಕೊಂಡಿದೆ. ವರ ಪಿಪಿಇ ಸೂಟ್ ಜೊತೆಗೆ ಕೈಗವಸು ಮಾಸ್ಕ್ ಧರಿಸಿ ಮದುವೆ ವಿಧಾನಗಳನ್ನು ಅನುಸರಿಸಿದ್ದಾನೆ.