ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುತ್ತಿಗೆದಾರರಿಂದ 5 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬ್ಲಾಕ್ ಅಭಿವೃದ್ಧಿ ಅಧಿಕಾರಿ(ಬಿಡಿಒ – Black Development Officer) ಮತ್ತು ಪಕ್ಷೇತರ ಶಾಸಕರ ಇಬ್ಬರು ಪುತ್ರರು ಸೇರಿದಂತೆ ನಾಲ್ವರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶನಿವಾರ ಬಂಧಿಸಿದೆ.
ಗುತ್ತಿಗೆದಾರರ ಬಾಕಿ ಬಿಲ್ ಗಳನ್ನು ವಿಲೇವಾರಿಗೊಳಿಸಲು ದೂರುದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ರಾಯಗಢದಲ್ಲಿ ನಿಯೋಜನೆಗೊಂಡಿರುವ ಬಿಡಿಒ ನೇತ್ರಮ್ ಮತ್ತು ತನಗಾಜಿ ಕ್ಷೇತ್ರದ ಸ್ವತಂತ್ರ ಶಾಸಕ ಕಾಂತಿ ಪ್ರಸಾದ್ ಮೀನಾ ಅವರ ಪುತ್ರರಾದ ಲೋಕೇಶ್ ಮೀನಾ ಮತ್ತು ಕೃಷ್ಣಕಾಂತ್ ಮೀನಾ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ತಮ್ಮ ಪುತ್ರರನ್ನು ಸುಳ್ಳು ಆರೋಪ ಹೊರಿಸಿ ಬಂದಿಸಲಾಗಿದೆ. ಗುತ್ತಿಗೆದಾರರು ತಮ್ಮ ಪುತ್ರರಿಂದ ಹಣ ಪಡೆದು ವಾಪಸ್ ಕೊಡುವುದಾಗಿ ಹೇಳಿ ಲಂಚ ಪ್ರಕರಣದಲ್ಲಿ ತಮ್ಮ ಪುತ್ರರನ್ನು ಎಸಿಬಿ ಬಲೆಗೆ ಕೆಡವಿದ್ದಾರೆ ಎಂದು ಶಾಸಕ ಕಾಂತಿ ಪ್ರಸಾದ್ ಮೀನಾ ವಾಗ್ದಾಳಿ ನಡೆಸಿದ್ದಾರೆ.