ನಾಲ್ವರು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರಗೈದ ಹಾಗೂ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಸರ್ಕಾರಿ ಶಾಲೆಯ ಪ್ರಾಂಶುಪಾಲ ಹಾಗೂ 9 ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆಯು ರಾಜಸ್ಥಾನದ ಅಲ್ವಾರ್ ಎಂಬಲ್ಲಿ ನಡೆದಿದೆ. ಒಬ್ಬಾಕೆ ಸಂತ್ರಸ್ತೆಯ ತಂದೆ ಏಕೆ ಶಾಲೆಗೆ ಹೋಗುತ್ತಿಲ್ಲ ಎಂದು ವಿಚಾರಿಸಿದ ವೇಳೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯು ಕಳೆದೊಂದು ವರ್ಷದಿಂದ ಶಾಲಾ ಶಿಕ್ಷಕರು ತನ್ನ ಮೇಲೆ ಸಾಮೂಹಿತ ಅತ್ಯಾಚಾರಗೈದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಅಲ್ಲದೇ ಪುರುಷ ಶಿಕ್ಷಕರ ಈ ಕೃತ್ಯಕ್ಕೆ ಸಾಥ್ ನೀಡಿದ್ದ ಇಬ್ಬರು ಮಹಿಳಾ ಶಿಕ್ಷಕಿಯರು ಅತ್ಯಾಚಾರದ ವಿಡಿಯೋಗಳನ್ನು ಚಿತ್ರೀಕರಿಸಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಂಧನ ಪೊಲೀಸ್ ಠಾಣೆಯ ಅಧಿಕಾರಿ ಮುಕೇಶ್ ಯಾದವ್, ಈ ಘಟನೆ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು ತಪ್ಪಿತಸ್ಥರ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯ ವೇಳೆ ಇನ್ನೂ ಮೂವರು ಸಂತ್ರಸ್ತೆಯರು ಪ್ರಾಂಶುಪಾಲರು ಹಾಗೂ ಶಿಕ್ಷಕರ ವಿರುದ್ಧ ದೂರು ನೀಡಲು ಮುಂದೆ ಬಂದಿದ್ದಾರೆ. ಸಂತ್ರಸ್ತೆಯರಲ್ಲಿ ಮೂರನೇ ತರಗತಿ, ನಾಲ್ಕು ಹಾಗೂ ಆರನೇ ತರಗತಿಯ ಬಾಲಕಿಯರು ಸೇರಿದ್ದಾರೆ. ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿಕೊಂಡಲ್ಲಿ ಕೊಲೆ ಮಾಡೋದಾಗಿ ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ತೆಯರು ಹೇಳಿದ್ದಾರೆ ಅಂತಾ ಮಾಹಿತಿ ನೀಡಿದ್ರು.
ಸಂತ್ರಸ್ತೆಯೊಬ್ಬಾಕೆ ಮಹಿಳಾ ಶಿಕ್ಷಕಿಯ ಬಳಿ ಈ ವಿಚಾರವಾಗಿ ಹೇಳಿಕೊಂಡಾಗ ಮಹಿಳಾ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಆಮಿಷ ನೀಡಿದ್ದಾರೆ. ನಿಮ್ಮ ಶಾಲಾ ಶುಲ್ಕವನ್ನು ಮಾಫಿ ಮಾಡಬೇಕು ಅಂದರೆ ಶಿಕ್ಷಕರು ಸಂತೋಷವಾಗಿರುವಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರು ಎನ್ನಲಾಗಿದೆ.