
ಪ್ರವೀಣ್ ಅಯುಕ್ತ್ ನಿರ್ದೇಶನದ ಈ ಚಿತ್ರವನ್ನು ವೇದಾಸ್ ಇನ್ಫಿನಿಟ್ ಪಿಚ್ಚರ್ ಬ್ಯಾನರ್ ನಡಿ ವಿಘ್ನೇಶ್ವರ ಗೌಡ ಹಾಗೂ ಜೈ ಗೌಡ ವಿಜಯ್ ಗೌಡ ಬಿದರಹಳ್ಳಿ ನಿರ್ಮಾಣ ಮಾಡಿದ್ದು, ರಾಜ ವರ್ಧನ್ ಸೇರಿದಂತೆ ರಿಹಾನಾ, ದಿವ್ಯಾ ಸುರೇಶ್, ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ, ಗಿರೀಶ್ ತೆರೆ ಹಂಚಿಕೊಂಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ಯೋಗೇಶ್ವರನ್ ಆರ್ ಛಾಯಾಗ್ರಹಣ, ಮದನ್ ಹರಿಣಿ, ಮುರಳಿ ನೃತ್ಯ ನಿರ್ದೇಶನ ಹಾಗೂ ವಿನೋದ್ ಮತ್ತು ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನವಿದೆ.