![](https://kannadadunia.com/wp-content/uploads/2023/09/5df40cb1-b4ec-45b1-8a6f-59c267cdc3c1.jpg)
ಚಿರಂಜೀವಿ ಸರ್ಜಾ ಅಭಿನಯದ ‘ರಾಜ ಮಾರ್ತಾಂಡ’ ಸಿನಿಮಾ ಅಕ್ಟೋಬರ್ 6 ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದ್ದು, ಮತ್ತೊಮ್ಮೆ ಚಿರಂಜೀವಿ ಸರ್ಜಾ ಅವರನ್ನು ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರಾಜ ಮಾರ್ತಂಡ ಚಿತ್ರತಂಡ ನಾಳೆ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಲು ನಿರ್ಧರಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ.
ಕೆ ರಾಮನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಸೇರಿದಂತೆ ದೀಪ್ತಿ, ಡೈನಮಿಕ್ ಹೀರೋ ದೇವರಾಜ್ ಹಾಗೂ ಚಿಕ್ಕಣ್ಣ ತೆರೆ ಹಂಚಿಕೊಂಡಿದ್ದಾರೆ. ಶ್ರೀ ಮಹದೇಶ್ವರ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿವೇದಿತಾ, ಪ್ರಣವ್ ಗೌಡ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2023/09/582bd74b-de75-4228-a81f-a96b1e012e20.jpg)