ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದ ಉದ್ಯಮಿ ರಾಜ್ ಕುಂದ್ರಾ ಈಗ ಮತ್ತೊಂದು ವಿಷಯದಲ್ಲಿ ಸುದ್ಧಿ ಆಗಿದ್ದಾರೆ. ತಮ್ಮ ಪತ್ನಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಹೆಸರಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾವಣೆ ಮಾಡಿದ್ದಾರೆ.
ಕಳೆದ ವರ್ಷ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಮಾಡಿದ ಆರೋಪದ ಮೇಲೆ ಬಂಧಿಯಾಗಿದ್ದರು. ಆ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ತನ್ನ ಕಷ್ಟ ಕಾಲದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಜನರಲ್ಲಿ ಕೇಳಿಕೊಂಡಿದ್ದರು. ಇದೀಗ 6 ತಿಂಗಳುಗಳ ಬಳಿಕ ರಾಜ್ ಕುಂದ್ರಾ ತಮ್ಮ 38.5 ಕೋಟಿ ಮೌಲ್ಯದ ಆಸ್ತಿಯನ್ನು ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ.
BIG NEWS: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ; ಹೈಕೋರ್ಟ್ ತೀರ್ಪು ಬರುವವರೆಗೂ ಸಮವಸ್ತ್ರ ಸಂಹಿತೆ ಪಾಲನೆ ಮಾಡಲು ಸೂಚನೆ
Squarefeatindia.com (ಸ್ಕ್ವಾರ್ಫೀಟ್ ಡಾಟ್ ಕಾಂ)ನ ನೋಂದಣಿ ದಾಖಲೆಗಳ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿಯ ಹೆಸರಿಗೆ 38.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬರೆದಿರುವುದಾಗಿ ಉಲ್ಲೇಖವಾಗಿದೆ. ಜುಹುನಲ್ಲಿರುವ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್ಗಳನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು Squarefeatindia.com ನ ಸಂಸ್ಥಾಪಕ ವರುಣ್ ಸಿಂಗ್ ತಿಳಿಸಿದ್ದಾರೆ. ಸದ್ಯ ಹಲವು ಸಿನಿಮಾ ಹಾಗೂ ರಿಯಾಲಿಟಿ ಶೋ ಗಳಲ್ಲಿ ಬ್ಯೂಸಿಯಾಗಿರುವ ಶಿಲ್ಪಾ ಹೊಸದಾಗಿ 38.5 ಕೋಟಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ.