
ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ.
ನೀಲಿ ಚಿತ್ರಗಳ ನಿರ್ಮಾಣ ಮಾಡಿ ಮೊಬೈಲ್ ಅಪ್ಲಿಕೇಶನ್ ಮೂಲಕ ಬಿತ್ತರಿಸುತ್ತಿದ್ದ ಆಪಾದನೆ ಮೇಲೆ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ’ಹಾಟ್‌ಶಾಟ್ಸ್’ ಎಂದ ಮೊಬೈಲ್ ಅಪ್ಲಿಕೇಶನ್ ಮೂಲಕ ವಯಸ್ಕರ ಚಿತ್ರಗಳನ್ನು ಬಿತ್ತರ ಮಾಡುತ್ತಿದ್ದ ಆರೋಪವನ್ನು ನಟಿ ಶಿಲ್ಪಾ ಶೆಟ್ಟಿ ಪತಿ ಎದುರಿಸುತ್ತಿದ್ದಾರೆ.
ಪ್ರತಿದಿನ 34 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಅವಧಿಗೆ 18 ಲಕ್ಷ ನಿಮ್ಮದಾಗಿಸಿಕೊಳ್ಳಿ
ಪ್ರಕರಣ ಸಂಬಂಧ ಎಲ್ಲ ಎಫ್‌ಐಆರ್‌ಗಳನ್ನು ಎಸ್‌ಐಟಿ ಪರಿಶೀಲನೆ ಮಾಡಲಿದೆ. ಈ ಕೇಸಿನ ಸಂಬಂಧ ಸಲ್ಲಿಸಲ್ಪಟ್ಟ ಎಲ್ಲಾ ಎಫ್‌ಐಆರ್‌ಗಳು, ದೂರುಗಳು ಈ ಎಸ್‌ಐಟಿಯ ವಿಚಾರಣಾ ವ್ಯಾಪ್ತಿಯೊಳಗೆ ಬರಲಿವೆ.
ತಮ್ಮ ಬಂಧನವನ್ನು ಪ್ರಶ್ನಿಸಿದ್ದ ರಾಜ್ ಕುಂದ್ರಾ ಹಾಗೂ ಅವರ ಬ್ಯುಸಿನೆಸ್ ಸಹವರ್ತಿ ರ‍್ಯಾನ್ ತೋರ್ಪ್ ಸಲ್ಲಿಸಿದ್ದ ಮನವಿಗಳನ್ನು ಬಾಂಬೆ ಹೈಕೋರ್ಟ್ ಆಗಸ್ಟ್ 7ರಂದು ವಜಾಗೊಳಿಸಿದೆ. ಜುಲೈನಲ್ಲಿ ಕುಂದ್ರಾ ಹಾಗೂ ತೋರ್ಪ್‌ರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.