alex Certify ಅಶ್ಲೀಲ ಚಿತ್ರಗಳ ಪ್ರಸಾರಕ್ಕೆ ಅಪ್ಲಿಕೇಶನ್​ ಸ್ಥಾಪನೆಗೆ ಮುಂದಾಗಿದ್ದ ರಾಜ್​ ಕುಂದ್ರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ಚಿತ್ರಗಳ ಪ್ರಸಾರಕ್ಕೆ ಅಪ್ಲಿಕೇಶನ್​ ಸ್ಥಾಪನೆಗೆ ಮುಂದಾಗಿದ್ದ ರಾಜ್​ ಕುಂದ್ರಾ…!

ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಬಂಧನಕ್ಕೊಳಗಾಗಿದ್ದಾರೆ.

ರಾಜ್​ ಕುಂದ್ರಾ ಬಂಧನದ ಬಳಿಕ ಅವರ ನೀಲಿ ಚಿತ್ರ ವಿತರಣೆ ಉದ್ಯಮದ ಒಂದೊಂದೆ ಕರಾಳ ಚಿತ್ರಗಳು ಬೆಳಕಿಗೆ ಬರುತ್ತಲೇ ಇದೆ.

ಪೊಲೀಸರು ಒದಗಿಸಿರುವ ಮಾಹಿತಿಯ ಪ್ರಕಾರ, ನೀತಿ ಉಲ್ಲಂಘನೆಯಿಂದಾಗಿ ಆ್ಯಪ್​ ಸ್ಟೋರ್​ನಲ್ಲಿ ಹಾಟ್​ಶಾಟ್​​​ಗಳನ್ನ ತೆಗೆದು ಹಾಕಿದ ಬಳಿಕ ರಾಜ್​ ಕುಂದ್ರಾ ಪ್ಲಾನ್​ ಬಿ ಒಂದನ್ನ ತಯಾರಿಸಿದ್ದರಂತೆ. ಇದರ ಪ್ರಕಾರ ಈ ಅಶ್ಲೀಲ ವಿಡಿಯೋಗಳನ್ನ ಹರಿಬಿಡುವ ಸಲುವಾಗಿ ಅವರು ಹೊಸ ಅಪ್ಲಿಕೇಶನ್​ ಒಂದು ಸ್ಥಾಪಿಸುವ ಯೋಚನೆ ಹೊಂದಿದ್ದರಂತೆ. ಈ ಮಾತಿಗೆ ಪುಷ್ಠಿ ನೀಡುವಂತಹ ಸ್ಕ್ರೀನ್​ ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿವೆ. ಈ ಸ್ಕ್ರೀನ್​ಶಾಟ್​ಗಳಲ್ಲಿ ರಾಜ್​ ಕುಂದ್ರಾ ಹೆಚ್​​ ಅಕೌಂಟ್ಸ್​​ ಗುಂಪಿನ ಮತ್ತೊಬ್ಬ ಸದಸ್ಯನ ಜೊತೆಗೆ ಪ್ಲಾನ್​ ಬಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಗ್ರೂಪ್​ನ ಇನ್ನೊಬ್ಬ ಸದಸ್ಯ ಸಂಭಾಷಣೆಯ ಸ್ಕ್ರೀನ್​ ಶಾಟ್​ಗಳನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ ರಾಜ್​ ಕುಂದ್ರಾ ಮುಂದಿನ 2 ರಿಂದ ಮೂರು ವಾರಗಳಲ್ಲಿ ಹೊಸ ಅಪ್ಲಿಕೇಶನ್​ ಆಂಡ್ರಾಯ್ಡ್ ಹಾಗೂ ಐಓಎಸ್​ಗಳಲ್ಲಿ ಇರಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಬ್​ ಎಂಬಾತ ಅಲ್ಲಿಯವರೆಗೆ ನಾವು ಎಲ್ಲಾ ನೀಲಿ ಚಿತ್ರಗಳನ್ನ ತೆಗೆದು ಮತ್ತೊಮ್ಮೆ ಪ್ಲೇಸ್ಟೋರ್​ಗೆ ಮನವಿ ಸಲ್ಲಿಸೋಣವೇ ಎಂದು ಕೇಳಿದ್ದಾರೆ.

ರಾಜ್​ ಕುಂದ್ರಾ ಹಾಗೂ ಅವರ ಬಾವ ಪ್ರದೀಪ್​ ಭಕ್ಷಿ ಸೇರಿ ನಡೆಸುತ್ತಿದ್ದ ಈ ಅಕ್ರಮದಲ್ಲಿ ಅವರು 1.85 ಲಕ್ಷ ರೂಪಾಯಿ ಆದಾಯ ಸಿನಿಮಾಗಳನ್ನ 4.52 ಲಕ್ಷ ರೂಪಾಯಿಗಳಿಗೆಲ್ಲ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಕುಂದ್ರಾ ಮಾಲೀಕತ್ವದ ವಿಯಾನ್​ ಇಂಡಸ್ಟ್ರೀಸ್​ ಕಂಪನಿಯು ಲಂಡನ್​ ಮೂಲದ ಕೆನ್ರಿನ್​ ಎಂಬ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡು ಈ ಅಶ್ಲೀಲ ಚಿತ್ರಗಳನ್ನ ಒಟಿಟಿ ವೇದಿಕೆಗಳಿಗೆ ಹರಿಬಿಡುತ್ತಿತ್ತು ಎನ್ನಲಾಗಿದೆ. ಹಾಟ್​ಶಾಟ್ಸ್​ನ ಮೂಲ ಮಾಲೀಕ ಕಂಪನಿಯಾದ ಕೆನ್ರಿನ್​ರನ್ನ ಕುಂದ್ರಾರ ಸಂಬಂಧಿ ಪ್ರದೀಪ್​ ಭಕ್ಷಿ ನಡೆಸುತ್ತಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...