ಜೈಲಿನಿಂದ ಹೊರಬಂದ ಉದ್ಯಮಿ ರಾಜ್ ಕುಂದ್ರಾ, 119 ಪೋರ್ನ್ ಕ್ಲಿಪ್ ಗಳನ್ನು ಸಂಗ್ರಹಿಸಿದ್ದು, ಅದನ್ನು 9 ಕೋಟಿ ರೂ.ಗೆ ಮಾರಾಟ ಮಾಡಲು ಬಯಸಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ದೊರೆತಿದ್ದು, ಕಣ್ಣೀರು ಹಾಕುತ್ತಲೇ ಮನೆಗೆ ಬಂದಿದ್ದಾರೆ. ಸೆಪ್ಟೆಂಬರ್ 20 ರಂದು ಮುಂಬೈ ಕೋರ್ಟ್ ಪೋರ್ನ್ ಪ್ರಕರಣದಲ್ಲಿ ಕುಂದ್ರಾಗೆ ಜಾಮೀನು ನೀಡಿದೆ. 50 ಸಾವಿರ ರೂಪಾಯಿಗಳ ಶ್ಯೂರಿಟಿ ಮೇರೆಗೆ ಉದ್ಯಮಿ ರಾಜ್ ಕುಂದ್ರಾಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದಕ್ಕೂ ಮುನ್ನ ಮುಂಬೈ ಪೊಲೀಸ್ ಅಪರಾಧ ವಿಭಾಗವು ಉದ್ಯಮಿಯ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ 119 ಪೋರ್ನ್ ವಿಡಿಯೊಗಳನ್ನು ಕಂಡುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಅದನ್ನು ಅವರು 9 ಕೋಟಿಗೆ ಮಾರಾಟ ಮಾಡಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ.
ಜೈಲಿನಿಂದ ಹೊರಬರುತ್ತಲೇ ಅವರು ಬಹಳ ಭಾವುಕರಾಗಿದ್ದರು. ತಮ್ಮ ಆಪ್ತರು ತಂದುಕೊಟ್ಟಿದ್ದ ಬಟ್ಟೆಗಳನ್ನು ಧರಿಸಿ, ಹಣೆಗೆ ತಿಲಕ ಇಟ್ಟುಕೊಂಡು ರಾಜ್ ಕುಂದ್ರಾ ಜೈಲಿನಿಂದ ಹೊರಬಂದಿದ್ದಾರೆ.