ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಜೈಲುಪಾಲಾದ ಬಳಿಕ ಅವರ ವಿರುದ್ಧ ಸಾಕಷ್ಟು ಆಪಾದನೆಗಳು ಕೇಳಿ ಬರ್ತಾನೆ ಇದೆ. ಮುಂಬೈ ಕೋರ್ಟ್ ಪ್ರಕರಣ ಸಂಬಂಧ ಕುಂದ್ರಾರನ್ನ ಜುಲೈ 27ರವರೆಗೂ ನ್ಯಾಯಾಂಗ ಬಂಧನದಲ್ಲಿಟ್ಟಿದೆ. ಮುಂಬೈ ಪೊಲೀಸರು ಪ್ರಕರಣದ ವಿಚಾರವಾಗಿ ನಿನ್ನೆ ಶಿಲ್ಪಾರ ಹೇಳಿಕೆಯನ್ನ ದಾಖಲಿಸಿದ್ದರು. ನಿನ್ನೆ ಶಿಲ್ಪಾ ನಿವಾಸದ ಮೇಲೆ ರೇಡ್ ಕೂಡ ಮಾಡಲಾಗಿತ್ತು.
ವಿಚಾರಣೆಯ ವೇಳೆ ಶಿಲ್ಪಾ ಪತಿಯ ಉದ್ಯಮದಲ್ಲಿ ತಾನು ಯಾವುದೇ ರೀತಿಯಲ್ಲೂ ಸಂಪರ್ಕ ಹೊಂದಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಶೃಂಗಾರ ಸಾಹಿತ್ಯಕ್ಕೂ ಅಶ್ಲೀಲ ವಿಡಿಯೋಗಳಿಗೂ ತುಂಬಾನೇ ವ್ಯತ್ಯಾಸವಿದೆ. ತಮ್ಮ ಪತಿ ಪಾರ್ನ್ ವಿಡಿಯೋಗಳನ್ನ ಮಾಡುತ್ತಿರಲಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದಾಳಿ ವೇಳೆ ಪೊಲೀಸರು ಶಿಲ್ಪಾ ನಿವಾಸದಿಂದ ಕಂಪ್ಯೂಟರ್ ಹಾಗೂ ಹಾರ್ಡ್ ಡಿಸ್ಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಕುಂದ್ರಾ ಮಾಲೀಕತ್ವದ ವಿಯಾನ್ ಇಂಡಸ್ಟ್ರೀಸ್ಗೆ ನೀವು ರಾಜೀನಾಮೆ ನೀಡಿದ್ದೇಕೆ ಎಂದೂ ಶಿಲ್ಪಾಗೆ ಪೊಲೀಸರು ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ.