
ನೀಲಿ ಚಿತ್ರಗಳ ನಿರ್ಮಾಣದ ಗುಮಾನಿಯಲ್ಲಿ ಭಾರೀ ಸುದ್ದಿಯಲ್ಲಿರುವ ರಾಜ್ ಕುಂದ್ರ ವಿರುದ್ಧ ನಟಿ ಫ್ಲೋರಾ ಸೈನಿ ಹೆಸರು ಕೇಳಿ ಬಂದಿತ್ತು.
ತಮ್ಮ ಮೊಬೈಲ್ ಅಪ್ಲಿಕೇಶನ್ ಬಾಲಿಫೇಮ್‌ನಲ್ಲಿ ಚಿತ್ರವೊಂದನ್ನು ಬಿಡುಗಡೆ ಮಾಡಲಿದ್ದು, ಅದಕ್ಕಾಗಿ ಹಾಡೊಂದರಲ್ಲಿ ನಟಿಸಲು ತಮಗೆ ರಾಜ್ ಕುಂದ್ರಾ ಆಫರ್ ಕೊಟ್ಟಿದ್ದರು ಎಂದು ವರದಿಗಳು ಬಂದಿದ್ದವು.
ಈ ಕುರಿತು ಸ್ಪಷ್ಟನೆ ಕೊಟ್ಟಿರುವ ಫ್ಲೋರಾ ಸೈನಿ, ತಮಗೂ ರಾಜ್ ಕುಂದ್ರಾ ಮತ್ತು ಅವರ ಸಹಾಯಕ ಉಮೇಶ್ ಕಾಮತ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟು ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಾಲ್ನಡಿಗೆಯಲ್ಲೇ ತೆರಳಿ ರಾಜೀನಾಮೆ ಸಲ್ಲಿಸಲಿರುವ ಯಡಿಯೂರಪ್ಪ
“ಕಾಸ್ಟಿಂಗ್ ಮಾಡುವ ಸಂದರ್ಭದಲ್ಲಿ ಒಮ್ಮೊಮ್ಮೆ ಫೋನ್ ಮಾಡಿ ಹೀಗೊಂದು ಸೀರೀಸ್ ಮಾಡುತ್ತಿದ್ದು, ನಟಿಸಲು ನಿಮಗೆ ಆಸಕ್ತಿ ಇದೆಯೇ ಎಂದು ಕೇಳುತ್ತಾರೆ. ನಾನು ಇದಕ್ಕೆ ಇಲ್ಲವೆಂದೇ ಹೇಳಿದ್ದೇನೆ. ಕಡಿಮೆ ಬಜೆಟ್‌ನ ಪ್ಲಾಟ್‌ಫಾರಂಗಳಲ್ಲಿ ನಾನು ಕೆಲಸ ಮಾಡುವುದಿಲ್ಲ. ನನಗೆ ಅಂಥ ಕೆಲಸ ಮಾಡುವ ಅಗತ್ಯವಿಲ್ಲ,” ಎಂದಿದ್ದಾರೆ ಸೈನಿ.
“ನೀಲಿ ಚಿತ್ರಗಳ ಕೇಸಿನಲ್ಲಿ ಸುಮ್ಮನೇ ನನ್ನ ಹೆಸರು ತರುವ ಮೂಲಕ ನೀವು ನನಗೆ ಅವಮಾನ ಮಾಡುತ್ತಿದ್ದೀರಿ. ಇದು ನನ್ನ ಹಕ್ಕುಗಳ ಉಲ್ಲಂಘನೆ. ನಾನು ಫಿಲಂ ಕುಟುಂಬದವಳಲ್ಲದ ಕಾರಣ ನನ್ನ ಹೆಸರನ್ನು ಈ ಕೇಸಿನಲ್ಲಿ ಎಳೆದು ತರಲು ನೋಡುತ್ತಾರೆ. ನನಗೆ ಇಂಥ ಪ್ರಚಾರ ಬೇಕಿಲ್ಲ,” ಎನ್ನುತ್ತಾರೆ ಸೈನಿ.
https://www.instagram.com/tv/CRtU2RgiRJW/?utm_source=ig_web_copy_link