ಸ್ಟಾಕ್ ಹೋಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಹೊಸ ಅಧ್ಯಯನದ ಪ್ರಕಾರ ಮಳೆನೀರು ಕುಡಿಯಲು ಅಸುರಕ್ಷಿತವಾಗಿರುತ್ತದೆ.
“ನಾವು ತೆಗೆದುಕೊಂಡ ಮೆಸರ್ಮೆಂಟ್ ಪ್ರಕಾರ ಭೂಮಿಯಲ್ಲೆಲ್ಲೂ ಮಳೆ ನೀರು ಕುಡಿಯಲು ಸುರಕ್ಷಿತವಾಗಿಲ್ಲ” ಎಂದು ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಇಯಾನ್ ಕಸಿನ್ಸ್ ತಿಳಿಸಿದ್ದಾರೆ.
2010ರಿಂದ ವಿಜ್ಞಾನಿಗಳ ತಂಡವು ಅಧ್ಯಯನ ಮಾಡಿದ ದತ್ತಾಂಶಗಳ ಸಂಕಲನವು “ಅಂಟಾರ್ಟಿಕಾ ಅಥವಾ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿಯೂ ಸಹ, ಮಳೆನೀರಿನ ಮಟ್ಟವು ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ ಪ್ರಸ್ತಾಪಿಸಿದ ಕುಡಿಯುವ ನೀರಿನ ಮಾರ್ಗಸೂಚಿಗಳಿಗಿಂತ ಹೆಚ್ಚಾಗಿದೆ ಎಂಬುದು ಕಂಡುಬಂದಿದೆ.
ನಾವು ಭೂಮಿಯನ್ನು ಬದಲಾಯಿಸಲಾಗದಂತೆ ಕಲುಷಿತಗೊಳಿಸುವ ಮೂಲಕ ಮಾನವ ಜೀವನಕ್ಕೆ ನಿರಾಶ್ರಯಗೊಳಿಸಿದ್ದೇವೆ. ಇನ್ನು ಮುಂದೆ ಯಾವುದೂ ಸ್ವಚ್ಛವಾಗಿಲ್ಲ. ಮಳೆ ನೀರೂ ಸಹ ಸಾಕಷ್ಟು ಸ್ವಚ್ಛವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಅತಿಯಾದ ರಾಸಾಯನಿಕ ಬಳಕೆಯಿಂದ ಮಾಲಿನ್ಯ ಉಂಟಾಗಿ ಮಳೆನೀರು ಸುರಕ್ಷಿತವಾಗಿಲ್ಲ ಎಂಬುದು ಅವರ ಅಧ್ಯಯನದ ಒಟ್ಟು ಸಾರಾಂಶವಾಗಿದೆ.