ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ 2-3 ದಿನದಿಂದ ಬಿಡುವು ನೀಡಿದ್ದ ವರುಣರಾಯ ಮತ್ತೆ ಅಬ್ಬರಿಸುತ್ತಿದ್ದಾನೆ.
ಭಾರಿ ಮಳೆಯಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ-ಕಾರ್ಕಳ ಹೆದ್ದಾರಿ ಬಂದ್ ಆಗಿದೆ. ಕೆರೆಕಟ್ಟೆ ಸಮೀಪ ಕಾರ್ಕಳ ಸಂಪರ್ಕಿಸುವ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಈ ಹಿನ್ನೆಲೆ ವಾಹನ ಸಂಚಾರ ಬಂದ್ ಆಗಿದೆ.
ರಸ್ತೆಯಲ್ಲಿ ನೀರು ತುಂಬಿದ್ದರೂ ಟ್ಯಾಂಕರ್ ಚಾಲಕನೋರ್ವ ಲಾರಿ ಚಲಾಯಿಸಿ ಹುಚ್ಚಾಟ ಮೆರೆದಿದ್ದಾನೆ. ಒಂದು ವೇಳೆ ಲಾರಿ ನೀರಿನ ಸೆಳೆತಕ್ಕೆ ಆಯ ತಪ್ಪಿದ್ರೆ ಲಾರಿ ಸಮೇತ ಚಾಲಕ ತುಂಗಾ ನದಿ ಪಾಲಾಗುತ್ತಿದ್ದನು.