
ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಪೆಟ್ರೋಲ್ ಬಂಕ್ ಗೆ ಮಳೆ ನೀರು ನುಗ್ಗಿದ್ದು, ನೀರು ಮಿಶ್ರಿತ ಡೀಸೆಲ್ ಹಾಕಿಸಿಕೊಂಡ ವಾಹನಗಳ ಸವಾರರಿಗೆ ಶಾಕ್ ಆಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ. ವಾಹನಗಳಿಗೆ ಮಳೆ ನೀರು ಮಿಶ್ರಿತ ಡೀಸೆಲ್ ಹಾಕಿದ್ದರಿಂದ 20 ಕ್ಕೂ ಅಧಿಕ ವಾಹನಗಳ ಇಂಜಿನ್ ಸೀಜ್ ಆಗಿ ಕೆಟ್ಟು ನಿಂತಿವೆ. ವಾಹನ ಮಾಲೀಕರು ಬಂಕ್ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಟ್ಟು ನಿಂತ ವಾಹನಗಳನ್ನು ರಿಪೇರಿ ಮಾಡಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.