ಬೆಂಗಳೂರು : ರಾಜ್ಯಕ್ಕೆ ‘ಮುಂಗಾರು’ (Monsoon) ಆಗಮನ ವಿಳಂಬವಾದರೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮಾಹಿತಿ ನೀಡಿದೆ.
ಮುಂಗಾರು ಮಾರುತಗಳು ಇನ್ನೂ ಕೂಡ ಕೇರಳ ಪ್ರವೇಶಿಸಿಲ್ಲ, ಆದ್ದರಿಂದ ರಾಜ್ಯಕ್ಕೆ ‘ಮುಂಗಾರು’ ಪ್ರವೇಶ ಇನ್ನೂ ಒಂದು ವಾರ ವಿಳಂಬವಾಗಲಿದೆ. ‘ಮುಂಗಾರು’ ಆಗಮನ ವಿಳಂಬವಾದರೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೇರಳ ರಾಜ್ಯಕ್ಕೆ ಮುಂಗಾರು ಆಗಮನದ ಮೂರು ನಾಲ್ಕು ದಿನಗಳಲ್ಲಿ ಕರ್ನಾಟಕಕ್ಕೆ ಮಳೆ ಎಂಟ್ರಿಯಾಗಲಿದೆ. ಆದರೆ ಇದರಿಂದ ಯಾವುದೇ ಸಮಸ್ಯೆ ಆಗಲ್ಲ, ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ ಜೂನ್ 4 ರಂದು ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿತ್ತು, ಮ್ಯಾಂಡಸ್ ಚಂಡಮಾರುತ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪಗೊಳ್ಳಲಿದೆ. ಈ ಹಿನ್ನೆಲೆ ಕೇರಳಕ್ಕೆ ಮುಂಗಾರು ಆಗಮನ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.