ಬೆಂಗಳೂರು: ಮಳೆಗಾಲದಲ್ಲಿಯೇ ಉರಿಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 4 ರಿಂದ 5 ಡಿಗ್ರಿಯಷ್ಟು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಶೇಕಡ 6 ರಷ್ಟು ಮಳೆ ಕೊರತೆ ಎದುರಾಗಿದೆ. ಕೃಷಿ ಬೆಳೆಗೆ ನೀರಿನ ಕೊರತೆ ಕಾಡುವ ಸಾಧ್ಯತೆ ಇದೆ. ಮಳೆ ನಂಬಿಕೊಂಡ ರೈತರಿಗೆ ಬೆಳೆ ನಷ್ಟದ ಆತಂಕ ಎದುರಾಗಿದೆ. ರಾಜ್ಯದ ಸರಾಸರಿ ತಾಪಮಾನ 4ರಿಂದ 5 ಡಿಗ್ರಿಯಷ್ಟು ಹೆಚ್ಚಳವಾಗಿದೆ. ಬೇಸಿಗೆ ಬಿಸಿಲಿನ ಜೊತೆಗೆ ಪೈಪೋಟಿ ನೀಡುವಂತೆ ಮಳೆಗಾಲದಲ್ಲಿ ಬಿಸಿಲಿನ ಪ್ರಖರತೆ ಕಂಡುಬಂದಿದೆ.
ಮೈಸೂರು 33, ಕಲಬುರ್ಗಿ 32, ರಾಯಚೂರು 32, ವಿಜಯಪುರ ಹಾಗೂ ಗದಗದಲ್ಲಿ 31 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ. ಕಳೆದ ತಿಂಗಳು ಉತ್ತಮ ಮಳೆಯಾಗಿದ್ದು, ಆದರೆ ಸೆಪ್ಟಂಬರ್ ನಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದೆ. ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ತೇವಾಂಶ ಕೊರತೆಯಿಂದ ಉಷ್ಣಾಂಶ ಹೆಚ್ಚಿದ್ದು, ಉರಿಬಿಸಿಲಿಗೆ ಜನ ಹೈರಾಣಾಗಿದ್ದಾರೆ.