ಬೆಂಗಳೂರು: ನಿರೀಕ್ಷೆಗಿಂತ ಒಂದು ದಿನ ಮೊದಲೇ ಮೇ 30ರಂದು ಕೇರಳ ಪ್ರವೇಶಿಸಿದ್ದ ಮುಂಗಾರು ಮಾರುತಗಳು ಮೇ 31ರಂದು ರಾಜ್ಯದ ಗಡಿ ಜಿಲ್ಲೆಗಳಿಗೆ ಪ್ರವೇಶಿಸಿದೆ.
ಕೇರಳಕ್ಕೆ ಎಂಟ್ರಿ ಕೊಟ್ಟಿದ್ದ ಮುಂಗಾರು ಮಾರುತಗಳು ಈಗಾಗಲೇ ರಾಜ್ಯಕ್ಕೆ ಪ್ರವೇಶಿಸಿವೆ. ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಆಗಿದೆ. ಮುಂಗಾರು ಪ್ರವೇಶದ ಘೋಷಣೆಗೆ ಮಾನದಂಡಗಳನ್ನು ಹವಾಮಾನ ಇಲಾಖೆ ಪರಿಶೀಲಿಸುತ್ತಿದೆ.
ಜೂನ್ 1 ಅಥವಾ 2 ರಂದು ಮಾನ್ಸೂನ್ ಆಗಮನದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ಮುಂಗಾರು ಮಾರುತಗಳು ಅಷ್ಟೊಂದು ಪ್ರಬಲವಾಗಿಲ್ಲ. ಎರಡು ಮೂರು ದಿನಗಳಲ್ಲಿ ಮುಂಗಾರು ಮಾರುತಗಳು ಪ್ರಬಲವಾಗಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.