ನವದೆಹಲಿ: ಸದ್ಯಕ್ಕೆ ರೈಲ್ವೆ ಟಿಕೆಟ್‌ನಲ್ಲಿ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ.
ರೈಲ್ವೆ ಟಿಕೆಟ್ ಗಳ ಮೇಲೆ ಮೊದಲು 54 ವಿಭಾಗಗಳಲ್ಲಿ ರಿಯಾಯಿತಿ ನೀಡುತ್ತಿದ್ದು, ಅದನ್ನು ನಿಲ್ಲಿಸಲಾಗುವುದು. ಟಿಕೆಟ್ ಗಳ ಮೇಲಿನ ರಿಯಾಯಿತಿ ಮರು ಸ್ಥಾಪಿಸುವುದು ಪ್ರಸ್ತುತ ಕಾರ್ಯಸಾಧುವಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಟಿಕೆಟ್ ಗಳ ಮೇಲಿನ ರಿಯಾಯಿತಿಯನ್ನು ಮತ್ತೆ ನೀಡುವುದು ಕಾರ್ಯಸಾಧುವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಕಲಚೇತನರು, ವಿದ್ಯಾರ್ಥಿಗಳು, 11 ರೀತಿಯ ರೋಗಿಗಳು ಹೊರತಾಗಿ ಉಳಿದ ವರ್ಗದ ಪ್ರಯಾಣಿಕರಿಗೆ 2020ರ ಮಾರ್ಚ್ 20ರಿಂದ ರಿಯಾಯಿತಿ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಇದನ್ನು ಮತ್ತೆ ನೀಡುವ ಬಗ್ಗೆ ಮನವಿಗಳು ಬಂದಿದ್ದು, ಅದು ಕಾರ್ಯಸಾಧುವಲ್ಲ ಎಂದು ಹೇಳಲಾಗಿದೆ. ಈ ಹಿಂದೆ 54 ವಿಭಾಗಗಳಲ್ಲಿ ರಿಯಾಯಿತಿ ಸೌಲಭ್ಯ ನೀಡಲಾಗುತ್ತಿದ್ದು, ಅದನ್ನು ಶಾಶ್ವತವಾಗಿ ಹಿಂಪಡೆಯಲಾಗುವುದು ಎಂದು ಹೇಳಲಾಗಿದೆ.