ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಮೇಲ್ದರ್ಜೆಯ ನಡೆಯೊಂದಕ್ಕೆ ಕೈಹಾಕಿರುವ ಭಾರತೀಯ ರೈಲ್ವೇ, ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಅಲ್ಯೂಮಿನಿಯಂ ಕೋಚ್ ಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.
ರೈಲುಗಳಿಗೆ ಅಲ್ಯೂಮಿನಿಯಮ್ ಕೋಚ್‌ಗಳನ್ನು ಉತ್ಪಾದನೆ ಮಾಡಲು ರಾಯ್‌ಬರೇಲಿಯಲ್ಲಿರುವ ಕೋಚ್ ಕಾರ್ಖಾನೆ ಯೋಜನೆ ಸಿದ್ಧಪಡಿಸಿಕೊಳ್ಳುತ್ತಿದೆ.
ಈ ಮೊದಲು ತಲಾ ಮೂರು ಅಲ್ಯೂಮಿನಿಯಮ್ ಕೋಚ್‌ಗಳ ಸೆಟ್‌ಗಳನ್ನು ಉತ್ಪಾದಿಸಲು ರಾಯ್ ಬರೇಲಿ ಕಾರ್ಖಾನೆ ಕೋಲ್ಕತ್ತಾ ಮೆಟ್ರೋಗೆ ಪರಿಕರ ಪೂರೈಸುವ ದಕ್ಷಿಣ ಕೊರಿಯಾದ ಡೆವಾನ್ಸಿಸ್ ಜೊತೆಗೆ 128 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. ಆದರೆ ಕೋವಿಡ್-19ನಿಂದಾಗಿ ಉತ್ಪಾದನಾ ಕಾರ್ಯ ನಿಧಾನವಾಗಿದೆ.
ಅಪರೂಪದ ಎರಡು ತಲೆ ನಾಗರಹಾವಿನ ರಕ್ಷಣೆ
ಈ ಕೋಚ್‌ಗಳನ್ನು ದಕ್ಷಿಣ ಕೊರಿಯಾದಲ್ಲಿ ಉತ್ಪಾದನೆ ಮಾಡಲಾಗಿದ್ದು, ಭಾರತದ ಕಾರ್ಖಾನೆಗಳಲ್ಲಿ ಜೋಡಿಸಲಾಗುತ್ತದೆ.
ಮೊದಲ ಹಂತದಲ್ಲಿ ರಾಜಧಾನಿ ಹಾಗೂ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಿಗೆ ಅಲ್ಯೂಮಿನಿಯಂ ಬೋಗಿಗಳನ್ನು ಫೆಬ್ರವರಿ 2022ರಲ್ಲಿ ಅಳವಡಿಸಲಾಗುತ್ತದೆ. ಹವಾನಿಯಂತ್ರಿತ ಬೋಗಿಗಳು ಹಾಗೂ ಪ್ಯಾಂಟ್ರೀ ಬೋಗಿಗಳು ಮತ್ತು ಗಾರ್ಡ್ ಕ್ಯಾಬಿನ್‌ಗಳನ್ನು ದಕ್ಷಿಣ ಕೊರಿಯಾ ಮೂಲದ ಸಂಸ್ಥೆ ಉತ್ಪಾದಿಸಲಿದ್ದು, ಈ ಬೋಗಿಗಳು 160 ಕಿಮೀ/ಗಂಟೆ ಹಾಗೂ 225 ಕಿಮೀ/ಗಂಟೆ ವೇಗದಲ್ಲಿ ಚಲಿಸಬಲ್ಲದಾಗಿವೆ.
ತುಕ್ಕುರಹಿತವಾದ ಅಲ್ಯೂಮಿನಿಯಂ ಕೋಚ್‌ಗಳು 40 ವರ್ಷ ಹೆಚ್ಚಿನ ಬಾಳಿಕೆ ಹೊಂದಬಲ್ಲವು. ಉಕ್ಕಿನ ಕೋಚ್‌ಗಳಿಗಿಂತ ಅಲ್ಯೂಮಿನಿಯಂ ಕೋಚ್‌ಗಳು ಹಗುರವಾಗಿದ್ದು, ಇಂಧನ ಕ್ಷಮತೆ ಹೆಚ್ಚಿಸಿ, ಕಾರ್ಯಾಚರಣಾ ವೆಚ್ಚ ತಗ್ಗಿಸಲಿವೆ.
ಅಲ್ಯೂಮಿನಿಯಂ ಕೋಚ್‌ಗಳ ಉತ್ಪಾದನೆಯನ್ನು ತ್ವರಿತವಾಗಿ ಮಾಡಬಲ್ಲದಾಗಿದ್ದು, ಸದೃಢವಾಗಿರುವ ಕಾರಣದಿಂದ ಇವುಗಳ ನಿರ್ವಹಣಾ ವೆಚ್ಚ ಕಡಿಮೆ ಇರಲಿದೆ.