alex Certify ರೈಲ್ವೇ ಪ್ರಯಾಣಿಕರಿಗೆ ಕೊರೋನಾ ಶಾಕ್: ಮಾಸ್ಕ್ ಧರಿಸದಿದ್ರೆ, ಉಗುಳಿದ್ರೆ 500 ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಪ್ರಯಾಣಿಕರಿಗೆ ಕೊರೋನಾ ಶಾಕ್: ಮಾಸ್ಕ್ ಧರಿಸದಿದ್ರೆ, ಉಗುಳಿದ್ರೆ 500 ರೂ. ದಂಡ

ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಇಟ್ಟಿದೆ. ರೈಲ್ವೇ ಪ್ಲಾಟ್ ಫಾರಂಗಳಲ್ಲಿ, ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ಉಗುಳುವುದು ಮತ್ತು ಫೇಸ್ ಮಾಸ್ಕ್ ಧರಿಸದಿದ್ದರೆ ಪ್ರಯಾಣಿಕರಿಗೆ 500 ರೂಪಾಯಿವರೆಗೆ ದಂಡ ವಿಧಿಸಲಾಗುವುದು.

ಈ ಆದೇಶವು ಆರು ತಿಂಗಳವರೆಗೆ ತಕ್ಷಣ ಜಾರಿಗೆ ಬರಲಿದೆ. ಶನಿವಾರದಿಂದಲೇ ನಿಯಮ ಜಾರಿಯಲ್ಲಿದ್ದು, ಕೊರೊನಾ ಸೋಂಕು ತಡೆಯಲು ಮಾಸ್ಕ್ ಧರಿಸುವುದು ನಿರ್ದಿಷ್ಟ ಮಾರ್ಗಸೂಚಿಯಾಗಿದೆ. 2020ರ ಮೇ 11 ರಂದು ಭಾರತೀಯ ರೈಲ್ವೆ ಈ ಬಗ್ಗೆ ಮಾರ್ಗಸೂಚಿ ನೀಡಿದೆ. ಎಲ್ಲಾ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸಬೇಕೆಂದು ಹೇಳಲಾಗಿದೆ. ಫೇಸ್ ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...