ರೈಲ್ವೇ ನೇಮಕಾತಿ ಮಂಡಳಿಯು ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್(ಟಿಟಿಇ) 7,784 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indianrailways.gov.in ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ರೈಲ್ವೇ ಟಿಟಿಇ ನೇಮಕಾತಿ 2023 ರ ಅರ್ಜಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ. ಅಭ್ಯರ್ಥಿಗಳು ಫಾರ್ಮ್ ಬಿಡುಗಡೆಯಾದ ದಿನದಿಂದ 30 ದಿನಗಳಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ: 7,784
ಗ್ರೂಪ್ C ಗಾಗಿ ಪೋಸ್ಟ್ ಗಳನ್ನು ಭರ್ತಿ ಮಾಡುತ್ತದೆ. ಅರ್ಜಿದಾರರು 10 ನೇ ತರಗತಿ(SSLC /SSC /ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು ಅಥವಾ 12 ನೇ ತರಗತಿ ಅಥವಾ ಡಿಪ್ಲೊಮಾವನ್ನು ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸುವವರು ಜನವರಿ 1, 2023 ಕ್ಕೆ 18 ರಿಂದ 30 ವರ್ಷ ವಯಸ್ಸಿನವರಾಗಿರಬೇಕು.
ರೈಲ್ವೇ ಟಿಟಿಇ ಹುದ್ದೆಗೆ ಆಯ್ಕೆಯಾದವರಿಗೆ 5,200 ರಿಂದ 20,200 ರೂ. ಜೊತೆಗೆ GP(ಒಟ್ಟು ವೇತನ) 1,900 ರೂ.
ಅರ್ಜಿದಾರರು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು(CBE) ತೆಗೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಎರಡನೇ ಸುತ್ತಿಗೆ ಕರೆಯಲಾಗುವುದು ಅಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಎಲ್ಲ ಮೂರು ಸುತ್ತುಗಳಲ್ಲಿ ತೇರ್ಗಡೆಯಾದವರನ್ನು ರೈಲ್ವೇ ಟಿಟಿಇ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
TTE ನೇಮಕಾತಿ 2023 ಗಾಗಿ CBT 200 ಅಂಕಗಳನ್ನು ಹೊಂದಿರುತ್ತದೆ ಮತ್ತು ತಲಾ 40 ಅಂಕಗಳ ಐದು ವಿಭಾಗಗಳನ್ನು ಹೊಂದಿರುತ್ತದೆ. ವಿಭಾಗಗಳು ಸೇರಿವೆ – ಸಾಮಾನ್ಯ ಅರಿವು, ಅಂಕಗಣಿತ, ತಾಂತ್ರಿಕ ಸಾಮರ್ಥ್ಯ, ತಾರ್ಕಿಕ ಸಾಮರ್ಥ್ಯ, ಸಾಮಾನ್ಯ ಬುದ್ಧಿವಂತಿಕೆ.
ಸಾಮಾನ್ಯ ವರ್ಗದ ಅಡಿಯಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ 500 ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ(ಎಸ್‌ಸಿ)/ ಪರಿಶಿಷ್ಟ ಪಂಗಡಗಳು(ಎಸ್‌ಟಿ)/ ಮಾಜಿ ಸೈನಿಕರು/ ವಿಕಲಚೇತನರು/ ಮಹಿಳೆಯರು/ ಅಲ್ಪಸಂಖ್ಯಾತರು/ ತೃತೀಯಲಿಂಗಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅರ್ಜಿ ಶುಲ್ಕ 250 ರೂ.