
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬಟ್ಟೆ ಮತ್ತು ನೀರಿನಿಂದ ರೈಲನ್ನು ಹಸ್ತಚಾಲಿತವಾಗಿ ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಆದರೆ ಕಾಲ ಬದಲಾದಂತೆ ಇದು ಯಾಂತ್ರೀಕರಣವಾಗಿದೆ. ಈ ವಿಡಿಯೋದಲ್ಲಿ ಸ್ವಯಂಚಾಲಿತ ರೈಲ್ವೇ ಕೋಚ್ ತೊಳೆಯುವ ಘಟಕವನ್ನು ನೋಡಬಹುದಾಗಿದೆ. ರೈಲಿನ ಹೊರಭಾಗದಲ್ಲಿರುವ ಮಣ್ಣನ್ನು ತೊಳೆಯಲು ಎತ್ತರದ ಸ್ಕ್ರಬ್ಬರ್‌ಗಳ ಗುಂಪು ಕಾರ್ಯ ನಿರ್ವಹಿಸುವುದನ್ನು ನೋಡಬಹುದು.
ಟ್ವಿಟರ್‌ನಲ್ಲಿ ಹಂಚಿಕೊಂಡಾಗಿನಿಂದ, 17 ಸೆಕೆಂಡುಗಳ ಚಿಕ್ಕ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ತಮಗೆ ಇದರ ಬಗ್ಗೆ ಹಲವಾರು ಪ್ರಶ್ನೆಗಳು ಇದ್ದವು. ಎಲ್ಲದ್ದಕ್ಕೂ ಉತ್ತರ ಸಿಕ್ಕಿರುವುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ.