ರೈಲ್ವೆ ಇಲಾಖೆಯು ಇತ್ತೀಚೆಗೆ ಅನೇಕ ಹೊಸತನಗಳನ್ನು ಪ್ರಕಟಿಸಿ ದೇಶವಾಸಿಗಳ ಗಮನಸೆಳೆಯುತ್ತಿದೆ. ಇದೀಗ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂಟಲಿಜೆಂಟ್ ಸೆನ್ಸಾರ್- ಬೇಸ್ಡ್ ಸಿಸ್ಟಮ್ಸ್ ಮತ್ತು ಇತರೆ ವಿಶೇಷತೆಗಳನ್ನು ಅಳವಡಿಸಿದೆ.
ತೇಜಸ್ ರೀತಿಯ ಸ್ಲೀಪರ್ ಕೋಚ್‌ಗಳನ್ನು ರೈಲ್ವೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಅಳವಡಿಸಲಾಗುತ್ತಿದೆ. ಈ ಮೂಲಕ ತನ್ನ ಪ್ರಯಾಣಿಕರಿಗೆ ‘ಬೆಸ್ಟ್ ಇನ್ ಕ್ಲಾಸ್’ ಪ್ರಯಾಣದ ಅನುಭವವನ್ನು ನೀಡಲು ಸ್ಮಾರ್ಟ್ ವೈಶಿಷ್ಟ್ಯ ಬಳಕೆ ಮಾಡಿದೆ. ಮೊದಲಿಗೆ ತೇಜಸ್ ಮಾದರಿಯ ಸ್ಲೀಪರ್ ಬೋಗಿಗಳನ್ನು ವೆಸ್ಟರ್ನ್ ರೈಲ್ವೆಯ ಮುಂಬೈ – ನವದೆಹಲಿ ರಾಜಧಾನಿ ಸ್ಪೆಷಲ್ ಎಕ್ಸ್‌ಪ್ರೆಸ್‌ನಲ್ಲಿ ಬಳಸಲಾಗಿದೆ.
ಪ್ರಯಾಣಿಕರ ಮಾಹಿತಿ ಮತ್ತು ಕೋಚ್ ಕಂಪ್ಯೂಟಿಂಗ್ ಘಟಕವನ್ನು (ಪಿಐಸಿಯು) ಹೊಂದಿದ್ದು, ಜಿಎಸ್ಎಂ ನೆಟ್‌ವರ್ಕ್ ಸಂಪರ್ಕ ಒದಗಿಸಲಾಗಿದೆ. ಇದು ರಿಮೋಟ್ ಸರ್ವರ್‌ಗೆ ವರದಿ ಮಾಡುತ್ತದೆ. ಸಿಸಿ ಟಿವಿ ರೆಕಾರ್ಡಿಂಗ್, ಟಾಯ್ಲೆಟ್ ವಾಸನೆ ಸೆನ್ಸಾರ್, ಪ್ಯಾನಿಕ್ ಸ್ವಿಚ್ ಮತ್ತು ಅಗ್ನಿಶಾಮಕ ಮತ್ತು ಅಲರಾಂ ವ್ಯವಸ್ಥೆ, ಗಾಳಿಯ ಗುಣಮಟ್ಟ ಮತ್ತು ಚಾಕ್ ಫಿಲ್ಟರ್ ಸೆನ್ಸಾರ್ ಮತ್ತು ಎನರ್ಜಿ ಮೀಟರ್‌ನೊಂದಿಗೆ ಸಂಯೋಜಿಸಲ್ಪಟ್ಟಿದ್ದು ಇವು ವ್ಯವಸ್ಥೆ ಸುಧಾರಣೆಗೆ ಸಹಕರಿಸಲಿವೆ.
ಪ್ರಪೋಸ್ ಮಾಡಿ ಮೂರು ವರ್ಷ; ಪ್ರಿಯಾಂಕ ಸಂಭ್ರಮಾಚರಣೆ
ಕೋಚ್ ಒಳಗೆ ಅಳವಡಿಸುವ ಎಲ್ಸಿಡಿಯು ಮುಂದಿನ ನಿಲ್ದಾಣ, ಮುಂದಿನ ಸ್ಟೇಷನ್‌ನ ಅಂತರ, ಆಗಮನದ ನಿರೀಕ್ಷಿತ ಸಮಯ, ವಿಳಂಬ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಂದೇಶಗಳಂತಹ ಪ್ರಮುಖ ಪ್ರಯಾಣ ಸಂಬಂಧಿ ಮಾಹಿತಿಯನ್ನು ಪ್ರದರ್ಶಿಸುತ್ತವೆ.
ಪ್ರತಿ ಕೋಚ್‌ನಲ್ಲಿ ಫ್ಲಶ್ ಎಲ್ಇಡಿ ಡಿಜಿಟಲ್ ಡೆಸ್ಟಿನೇಶನ್ ಬೋರ್ಡ್ ಹಾಕಲಾಗಿದೆ. ಅದರಲ್ಲಿ ಮೊದಲ ಸಾಲು ರೈಲು ಸಂಖ್ಯೆ ಮತ್ತು ಕೋಚ್ ಬಗ್ಗೆ ವಿವರಣೆ ಪ್ರದರ್ಶಿಸುತ್ತದೆ ಮತ್ತು ಎರಡನೇ ಸಾಲಿನಲ್ಲಿ ಕೊನೆಯ ನಿಲ್ದಾಣ, ಮಧ್ಯದಲ್ಲಿ ಬರುವ ಸ್ಟೇಷನ್ ವಿವರವನ್ನು ಬಹು ಭಾಷೆಗಳಲ್ಲಿ ಪ್ರದರ್ಶಿಸುತ್ತದೆ.
ಪ್ರತಿ ಕೋಚ್‌ನಲ್ಲಿ ಆರು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದು ಲೈವ್ ರೆಕಾರ್ಡಿಂಗ್ ಆಗಲಿದೆ. ಹಗಲು-ರಾತ್ರಿ ವಿಜನ್ ಸಾಮರ್ಥ್ಯ ಹೊಂದಿರುವ ಕ್ಯಾಮೆರಾಗಳು, ಕಡಿಮೆ ಬೆಳಕಿನ ಸ್ಥಿತಿಯಲ್ಲಿಯೂ ಸಹ ಮುಖ ಗುರುತಿಸುತ್ತದೆ.
ಎಲ್ಲಾ ಮುಖ್ಯ ಪ್ರವೇಶ ದ್ವಾರಗಳನ್ನು ಗಾರ್ಡ್ ನಿಯಂತ್ರಿಸುತ್ತದೆ, ಎಲ್ಲಾ ಬಾಗಿಲುಗಳನ್ನು ಮುಚ್ಚುವವರೆಗೆ ರೈಲು ಪ್ರಾರಂಭವಾಗುವುದಿಲ್ಲ. ಅದೇ ರೀತಿ ಎಲ್ಲಾ ಬೋಗಿಗಳಿಗೆ ಸ್ವಯಂಚಾಲಿತ ಫೈರ್ ಅಲಾರ್ಮ್ ಮತ್ತು ಡಿಟೆಕ್ಷನ್ ಸಿಸ್ಟಮ್ ಒದಗಿಸಲಾಗಿದೆ, ಸ್ವಯಂಚಾಲಿತ ಅಗ್ನಿ ನಿಗ್ರಹ ವ್ಯವಸ್ಥೆಯನ್ನು ಸಹ ಹೊಂದಿವೆ. ವೈದ್ಯಕೀಯ ಅಥವಾ ಭದ್ರತಾ ತುರ್ತುಸ್ಥಿತಿಗಾಗಿ ತುರ್ತು ಟಾಕ್‌ಬ್ಯಾಕ್ ವ್ಯವಸ್ಥೆ ಮಾಡಲಾಗಿದೆ.
BIG NEWS: ಸಿಎಂ BSY ಪರ ಮತ್ತೆ ಬ್ಯಾಟ್ ಬೀಸಿದ ಎಂ.ಬಿ.ಪಾಟೀಲ್; ಕುತೂಹಲ ಮೂಡಿಸಿದ ‘ಕೈ’ ನಾಯಕನ ಹೇಳಿಕೆ
ಪ್ರತಿ ಕೋಚ್‌ನೊಳಗಿನ ಟಾಯ್ಲೆಟ್ ಆಕ್ಯುಪೆನ್ಸಿಯನ್ನು ಸ್ವಯಂಚಾಲಿತವಾಗಿ ಪ್ರದರ್ಶಿಸುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿ ಪ್ರತಿ ಶೌಚಾಲಯದಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಶೌಚಾಲಯಗಳಲ್ಲಿ ಡೂಸ್ ಮತ್ತು ಡೋಂಟ್ ಪ್ರಕಟಣೆಗಳನ್ನು ಪ್ರಸಾರ ಮಾಡುತ್ತದೆ.
ಇದೇ ರೀತಿ ಇನ್ನೂ ಹಲವು ಸುಧಾರಿತ ವ್ಯವಸ್ಥೆ ಅಳವಡಿಕೆ ಮಾಡಲಾಗಿದೆ.