ರದ್ದಾದ ಟಿಕೆಟ್‌ನಲ್ಲಿ 35 ರೂಪಾಯಿ ರೀಫಂಡ್ ಮಾಡುವಂತೆ ಆಗ್ರಹಿಸಿ ಒಬ್ಬ ವ್ಯಕ್ತಿ ಭಾರತೀಯ ರೈಲ್ವೆ ಜತೆಗೆ ಸತತ 5 ವರ್ಷ ನಡೆಸಿದ ಹೋರಾಟದ ಫಲ, 3 ಲಕ್ಷ IRCTC ಬಳಕೆದಾರರಿಗೆ ಒಟ್ಟಾಗಿ 2.43 ಕೋಟಿ ರೂಪಾಯಿ ರೀಫಂಡ್ ಆಗಿದೆ.
ಕೋಟಾ ಮೂಲದ ಇಂಜಿನಿಯರ್ ಸುಜೀತ್ ಸ್ವಾಮಿ ಈ ರೀತಿ ಹೋರಾಟ ನಡೆಸಿದವರು. ಇದಕ್ಕಾಗಿ ಅವರು ಸರಿ ಸುಮಾರು 50 ಸಲ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಆರ್‌ಟಿಐ ಅರ್ಜಿಗಳನ್ನು ಅವರು ರೈಲ್ವೇ, IRCTC, ಹಣಕಾಸು ಸಚಿವಾಲಯ ಮತ್ತು ಸೇವಾ ತೆರಿಗೆ ಇಲಾಖೆಗಳಿಗೆ ಸಲ್ಲಿಸಿದ್ದರು.
BREAKING: ಜೂನ್ 2 ಕ್ಕೆ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ
ಈ ಇಲಾಖೆಗಳ ಜತೆಗಿನ ಪತ್ರ ವ್ಯವಹಾರ ನಿಜವಾಗಿಯೂ ದೀರ್ಘವಾಗಿತ್ತು. ಆದರೆ ಅಂತಿಮವಾಗಿ ನನ್ನೊಂದಿಗೆ ತಲಾ 35 ರೂಪಾಯಿಯಂತೆ ಅಂದಾಜು 3 ಲಕ್ಷ ಬಳಕೆದಾರರಿಗೆ ಒಟ್ಟು 2.43 ಕೋಟಿ ರೂಪಾಯಿ ಮರುಪಾವತಿ ಆಗಿದೆ. ಇದು ತೃಪ್ತಿ ನೀಡಿದೆ ಎಂದು ಅವರು ಹೇಳಿದರು.
ಜಿಎಸ್‌ಟಿ ಜಾರಿಯಾಗುವ ಮುನ್ನ ತನ್ನ ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ತೆರಿಗೆಯಾಗಿ ವಿಧಿಸಲಾಗಿದ್ದ 35 ರೂಪಾಯಿ ಹಿಂಪಡೆಯುವ ಸಲುವಾಗಿ ಈ ಹೋರಾಟವನ್ನು ಸ್ವಾಮಿ ನಡೆಸಿದ್ದರು.
ಕೋಟಾದಿಂದ ನವದೆಹಲಿಗೆ 2017 ರ ಜುಲೈ 2 ಕ್ಕೆ ಗೋಲ್ಡನ್ ಟೆಂಪಲ್ ಮೇಲ್‌ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಿದ್ದೆ. 765 ರೂ. ಬೆಲೆಯ ಟಿಕೆಟ್ ರದ್ದುಗೊಳಿಸಿದಾಗ, 65 ರೂಪಾಯಿ ಬದಲಿಗೆ 100 ರೂಪಾಯಿ ಕಡಿತದೊಂದಿಗೆ ರೂ. 665 ರ ಮರುಪಾವತಿ ಪಡೆದಿದ್ದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೂ ಮುನ್ನ ಟಿಕೆಟ್ ರದ್ದುಗೊಳಿಸಿದ್ದರೂ, ಸೇವಾ ತೆರಿಗೆಯಾಗಿ 35 ರೂಪಾಯಿ ಕಡಿತಗೊಳಿಸಿದ್ದನ್ನು ಪ್ರಶ್ನಿಸಿರುವುದಾಗಿ ಸ್ವಾಮಿ ವಿವರಿಸಿದ್ದಾರೆ.
ಐದು ವರ್ಷಗಳ ನಂತರ ಅವರ ಮನವಿಗೆ ಸ್ಪಂದಿಸಿದ ಭಾರತೀಯ ರೈಲ್ವೇಯು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ ಸುಮಾರು 2.98 ಲಕ್ಷ ಬಳಕೆದಾರರು ತಮ್ಮ ಟಿಕೆಟ್‌ಗಳ ಮೇಲೆ 35 ರೂಪಾಯಿ ಮರುಪಾವತಿಯನ್ನು ಪಡೆಯುತ್ತಾರೆ ಎಂದು ಹೇಳಿದೆ.