ನವದೆಹಲಿ: ಎಲ್ಲಾ ರೈಲುಗಳಲ್ಲಿ ‘ಪ್ರೀಮಿಯಂ ತತ್ಕಾಲ್’ ಯೋಜನೆಯನ್ನು ಮುಂದಿನ ದಿನಗಳಲ್ಲಿ ರೈಲ್ವೆಯು ಪರಿಚಯಿಸಬಹುದು. ಈ ಕ್ರಮವನ್ನು ಪರಿಗಣಿಸಲಾಗುವುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಯೋಜನೆಯು ‘ಪ್ರೀಮಿಯಂ ತತ್ಕಾಲ್’ ಕೋಟಾದ ಅಡಿಯಲ್ಲಿ ರೈಲಿನಲ್ಲಿ ಕೆಲವು ಆಸನಗಳನ್ನು ಕಾಯ್ದಿರಿಸುತ್ತದೆ, ಇದನ್ನು ಡೈನಾಮಿಕ್ ದರದ ಅನ್ವಯ ಬುಕ್ ಮಾಡಬಹುದು.
ಕೊನೆಯ ಕ್ಷಣದಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಈ ಕೋಟಾದಿಂದ ಅನುಕೂಲವಾಗುತ್ತದೆ. ‘ಪ್ರೀಮಿಯಂ ತತ್ಕಾಲ್’ ಕೋಟಾದ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಸ್ವಲ್ಪ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಯೋಜನೆಯ ಅಡಿಯಲ್ಲಿರುವ ದರವು ಮೂಲ ರೈಲು ದರ ಮತ್ತು ಹೆಚ್ಚುವರಿ ತತ್ಕಾಲ್ ಶುಲ್ಕಗಳನ್ನು ಒಳಗೊಂಡಿರುತ್ತದೆ.
ಪ್ರಸ್ತುತ, ಪ್ರೀಮಿಯಂ ತತ್ಕಾಲ್ ಬುಕಿಂಗ್ ಆಯ್ಕೆಯು ಸುಮಾರು 80 ರೈಲುಗಳಿಗೆ ಲಭ್ಯವಿದೆ. ಎಲ್ಲಾ ರೈಲುಗಳಲ್ಲಿ ಕೋಟಾವನ್ನು ಜಾರಿಗೊಳಿಸುವುದರಿಂದ ರೈಲ್ವೇ ಇಲಾಖೆಗೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ, ಇದು ದರ ರಿಯಾಯಿತಿಗಳ ವೆಚ್ಚದ ಹೊರೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. 2020-21ನೇ ಸಾಲಿನಲ್ಲಿ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಬುಕಿಂಗ್ ನಿಂದ ರೈಲ್ವೇ 500 ಕೋಟಿ ರೂ.ಗೂ ಹೆಚ್ಚು ಗಳಿಸಿದೆ.