
ನವದೆಹಲಿ: ಕೊರೋನಾ ಬಿಕ್ಕಟಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಕಿರಿಯ ನಾಗರಿಕರಿಗೆ ಟಿಕೆಟ್ ರಿಯಾಯಿತಿ ಸ್ಥಗಿತಗೊಳಿಸಿದ್ದ ರೈಲ್ವೆ ಇಲಾಖೆ ಮತ್ತೆ ರಿಯಾಯಿತಿ ನೀಡುವ ಸಾಧ್ಯತೆ ಇದೆ.
ಕಿರಿಯ ನಾಗರಿಕರು, ಕ್ರೀಡಾಪಟುಗಳು ಸೇರಿದಂತೆ ಹಲವು ವರ್ಗದವರಿಗೆ ರೈಲ್ವೆ ಟಿಕೆಟ್ ನಲ್ಲಿ ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸಗಿತಗೊಳಿಸಲಾಗಿದ್ದ ಸೌಲಭ್ಯವನ್ನು ಮತ್ತೆ ಮುಂದುವರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹಿರಿಯ ನಾಗರಿಕರು, ಕ್ರೀಡಾಪಟುಗಳು ರೋಗಿಗಳು ಸೇರಿದಂತೆ 11 ವರ್ಗದವರಿಗೆ ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.