ನವದೆಹಲಿ: ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ ನೀಡಲಾಗಿದೆ. ಇನ್ನು ಮುಂದೆ ಪ್ಯಾಸೆಂಜರ್ ರೈಲು, ಮೆಮು, ಡೆಮು ರೈಲುಗಳ ಪ್ರಯಾಣದ ಶೇಕಡ 50ರಷ್ಟು ಕಡಿಮೆಯಾಗಲಿದೆ.
ಕೊರೋನಾ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ಆರ್ಡಿನರಿ ಕ್ಲಾಸ್ ದರವನ್ನು ರೈಲ್ವೆ ಇಲಾಖೆ ಮರು ಜಾರಿಗೊಳಿಸಲು ತೀರ್ಮಾನ ಕೈಗೊಂಡಿದೆ. ಕರೋನಾ ಸಂದರ್ಭದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಎಕ್ಸ್ ಪ್ರೆಸ್ ಸ್ಪೆಷಲ್, ಮೆಮು ಡೆಮು ಎಕ್ಸ್ ಪ್ರೆಸ್ ಗಳಾಗಿ ಪರಿವರ್ತಿಸಲಾಗಿದ್ದ ರೈಲುಗಳನ್ನು ಮೊದಲಿನಂತೆಯೇ ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಕೊರೋನಾ ಸಂದರ್ಭದಲ್ಲಿ ಕನಿಷ್ಠ ಟಿಕೆಟ್ ದರವನ್ನು 10 ರೂಪಾಯಿಯಿಂದ 30 ರೂಪಾಯಿಗೆ ಹೆಚ್ಚಳ ಮಾಡಲಾಗಿತ್ತು. ಇನ್ನು ಮುಂದೆ ಪ್ಯಾಸೆಂಜರ್ ರೈಲು, ಮೆಮು ಡೆಮು ರೈಲುಗಳ ಪ್ರಯಾಣ ದರ ಶೇಕಡ 50ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ರೈಲ್ವೇ ಪ್ರಯಾಣಿಕರಿಗೆ ದೊಡ್ಡ ಪರಿಹಾರವಾಗಿ ರೈಲ್ವೆಯು ಕೋವಿಡ್ ಪೂರ್ವದ ಮಟ್ಟಕ್ಕೆ ಟಿಕೆಟ್ ದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ಕ್ರಮವು ದೈನಂದಿನ ಪ್ರಯಾಣಿಕರಿಗೆ ಆರ್ಥಿಕ ಪರಿಹಾರವನ್ನು ಒದಗಿಸುವ ಗುರಿ ಹೊಂದಿದೆ, ಪ್ರಯಾಣಿಕ ರೈಲುಗಳ ಬೆಲೆಗಳು ಸರಿಸುಮಾರು 40-50 ಪ್ರತಿಶತದಷ್ಟು ಇಳಿಯುತ್ತವೆ. ಈ ಹಿಂದೆ ಪ್ಯಾಸೆಂಜರ್ ರೈಲು ಪ್ರಯಾಣಕ್ಕಾಗಿ ಪ್ರಯಾಣಿಕರು ಎಕ್ಸ್ ಪ್ರೆಸ್ ದರವನ್ನು ಪಾವತಿಸಬೇಕಾಗಿತ್ತು.