ಮುಂಬೈ: ವರುಣಾರ್ಭಟಕ್ಕೆ ಹಲವು ರಾಜ್ಯಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು ಜಾಲಾವೃತಗೊಂಡಿವೆ.
ಮಹಾ ಮಳೆಯಿಂದಾಗಿ ಮುಂಬೈನ ರೈಲು ನಿಲ್ದಾಣಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈಲು ಹಳಿಗಳು ಮುಳುಗಡೆಯಾಗಿವೆ. ರೈಲಿನ ಹಳಿಗಳ ನಡುವೆ ನಿಂತಿರುವ ನೀರಿನಲ್ಲಿ ಮೀನುಗಳು ಸ್ವಚ್ಛಂದವಾಗಿ ಈಜಾಡುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮುಂಬೈನ ರೈಲ್ವೆ ಸ್ಟೇಷನ್ ವೊಂದರಲ್ಲಿ ರೈಲು ಹಳಿಗಳ ಮಧ್ಯೆ ನಿಂತಿರುವ ನೀರಿನಲ್ಲಿ ಮೀನುಗಳು ಸ್ವಿಮ್ ಮಾಡುತ್ತಿದ್ದು, ಮೀನುಗಳ ಸ್ವಚ್ಛಂದದ ಈಜಾಟವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ. ಮಳೆ ಅಬ್ಬರಕ್ಕೆ ರೈಲ್ವೆ ಟ್ರ್ಯಾಕ್ ಗಳೇ ಮೀನುಗಳಿಗೆ ಸ್ವಿಮ್ಮಿಂಗ್ ಪೂಲ್ ಗಳಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.