ನವದೆಹಲಿ: ರೈಲ್ವೆ ಇಲಾಖೆಯ ಸಿಬ್ಬಂದಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ನೀಡಲಾಗಿದೆ. ಸುಮಾರು 80,000 ರೈಲ್ವೆ ಇಲಾಖೆ ನೌಕರರ ವೇತನ 2500 ರೂ.ನಿಂದ 4000 ರೂ.ವರೆಗೆ ಹೆಚ್ಚಳ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ. ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ರೈಲ್ವೇ ನೌಕರರಿಗೆ ವೇತನ ಏರಿಕೆಯಿಂದ ಆರ್ಥಿಕ ಹೊರೆಯಾಗುವುದಿಲ್ಲ. ವಿವಿಧ ಸುಧಾರಣೆ ಕ್ರಮಗಳಿಂದ ಇಲಾಖೆಯಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದ್ದು, ಶೀಘ್ರವೇ ನೌಕರರ ವೇತನ 4000 ರೂ.ವರೆಗೆ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.
ಸಂಭವನೀಯ ರೈಲು ಅಪಘಾತ ತಡೆಗೆ ರೈಲ್ವೆ ಹಳಿಗಳಿಗೆ ಸಮಾನಾಂತರವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಜಾನುವಾರುಗಳು ಹಳಿ ದಾಟುವ ಸಂದರ್ಭದಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದ್ದು, ಇದನ್ನು ತಪ್ಪಿಸಲು ಐದಾರು ತಿಂಗಳಲ್ಲಿ ಒಂದು ಸಾವಿರ ಕಿಲೋಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.