10 ನೇ ತರಗತಿ, ಐಟಿಐ ಪಾಸಾದವರಿಗೆ ರೈಲ್ವೇ ಇಲಾಖೆ ನೈರುತ್ಯ ರೈಲ್ವೆ ವಿಭಾಗದ ಅಪ್ರೆಂಟಿಸ್ ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
1004 ಅಪ್ರೆಂಟಿಸ್ ಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನವಾಗಿದೆ.
ಎಸ್ಎಸ್ಎಲ್ಸಿ ಹಾಗೂ ಐಟಿಐ –ವೆಲ್ಡರ್, ಮೆಕಾನಿಕಲ್, ಫಿಟ್ಟರ್, ಎಲೆಕ್ಟ್ರಿಷಿಯನ್ ಮೊದಲಾದ ಸಂಬಂಧಿತ ಟ್ರೇಡ್ ವಿದ್ಯಾರ್ಹತೆ ಹೊಂದಿರಬೇಕಿದೆ. ಕೇಂದ್ರದ ನಿಯಮಗಳನ್ವಯ ಮಾಸಿಕ 8 ಸಾವಿರ ರೂಪಾಯಿಂದ 16 ಸಾವಿರ ರೂಪಾಯಿವರೆಗೆ ತರಬೇತಿ ಭತ್ಯೆ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಜನವರಿ 9 ಕೊನೆಯ ದಿನವಾಗಿದೆ. ಮೆಟ್ರಿಕ್ಯುಲೇಷನ್ ಮತ್ತು ಐಟಿಐ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು.
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಲಯದಲ್ಲಿ 287, ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ 217, ಬೆಂಗಳೂರಲ್ಲಿ 280, ಮೈಸೂರಿನಲ್ಲಿ 177 ಹಾಗೂ ಮೈಸೂರು ವರ್ಕ್ ಶಾಪ್ ನಲ್ಲಿ 43 ಹುದ್ದೆಗಳು ಇವೆ. ಅರ್ಜಿ ಸಲ್ಲಿಕೆ ಮತ್ತು ಮಾಹಿತಿಗಾಗಿ http://www.rrchubli.in/ ವೆಬ್ ಸೈಟ್ ಗಮನಿಸಬಹುದಾಗಿದೆ.