alex Certify ಗುಡ್ ನ್ಯೂಸ್: ನೈರುತ್ಯ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ನೈರುತ್ಯ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು.

ವೈದ್ಯರು –ಎಂಬಿಬಿಎಸ್, dnb 2 ಹುದ್ದೆ, ವೈದ್ಯರು -ಎಂಬಿಬಿಎಸ್ 12 ಹುದ್ದೆ, ನರ್ಸಿಂಗ್ –ಬಿಎಸ್ಸಿ ನರ್ಸಿಂಗ್ 19 ಹುದ್ದೆ, ಫಾರ್ಮಾಸಿಸ್ಟ್ – ಫಾರ್ಮಸಿ ಡಿಪ್ಲೊಮಾ -2 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಮೇ 4 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಆಫೀಸ್ ಆಫ್ ಸೀನಿಯರ್ ಡಿವಿಜನ್ ಪರ್ಸೋನಲ್ ಆಫೀಸ್, ಡಿವಿಜನಲ್ ರೈಲ್ವೆ ಮ್ಯಾನೇಜರ್ ಆಫೀಸ್, ಇರ್ವಿನ್ ರೋಡ್, ಮೈಸೂರು ಇಲ್ಲಿ ಸಂದರ್ಶನ ನಡೆಯಲಿದೆ.

ಮಾಹಿತಿಗಾಗಿ 0821 -2428630, www.http://swr.indianrailways.gov.in/ ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...