ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತರಾದ ಹತ್ತನೇ ತರಗತಿ ಪಾಸ್ ಆದವರಿಗೆ ಖುಷಿ ಸುದ್ದಿ ಇದೆ.
ವಾರಣಾಸಿಯ ಬನಾರಸ್ ರೈಲ್ ಇಂಜಿನ್ ಫ್ಯಾಕ್ಟರಿಯು 45ನೇ ಬ್ಯಾಚ್ ಆಕ್ಟ್ ಅಪ್ರೆಂಟಿಸ್ 2021ರ ಅಧಿಸೂಚನೆಯನ್ನು ಹೊರಡಿಸಿದೆ.
ಇದರ ಪ್ರಕಾರ ವಿವಿಧ ಟ್ರೇಡ್‌ಗಳಿಗಾಗಿ 374 ಅಪ್ರೆಂಟಿಸ್‌ಗಳ ಪೋಸ್ಟ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ನೇಮಕಾತಿಗಳನ್ನು ಐಟಿಐ ಪಾಸ್ ಮತ್ತು 10ನೇ ತರಗತಿ ಪಾಸ್ ವಿದ್ಯಾರ್ಹತೆ ಹೊಂದಿರುವ ಯುವಕರನ್ನು ಮಾತ್ರ ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 26 (ಸಂಜೆ 4.45 ರೊಳಗೆ).
ನಕಲಿ ಅಂಕಪಟ್ಟಿ ನೀಡಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಪಡೆಯಲು ಯತ್ನ; ಯುವಕನ ವಿರುದ್ಧ ದೂರು ದಾಖಲು
ಸಂಬಂಧಪಟ್ಟ ದಾಖಲೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಕೊನೆಯ ದಿನ 28 ಏಪ್ರಿಲ್ 2022 (ಸಮಯ 4.45 ರವರೆಗೆ).
ಆಸಕ್ತ ಅಭ್ಯರ್ಥಿಗಳು blw.indianrailways.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ :
ಐಟಿಐ ಹುದ್ದೆಗಳಿಗೆ: ಕನಿಷ್ಠ ಶೇ. 50 ಅಂಕಗಳೊಂದಿಗೆ 10ನೇ ತರಗತಿ ಪಾಸ್ ಮತ್ತು ಸಂಬಂಧಿತ ಟ್ರೇಡ್ ಪ್ರಮಾಣಪತ್ರ ಹೊಂದಿರಬೇಕು
ಐಟಿಐ ಅಲ್ಲದ ಹುದ್ದೆಗಳಿಗೆ: ಕನಿಷ್ಠ ಶೇ.50 ಅಂಕಗಳೊಂದಿಗೆ 10ನೇ ತರಗತಿ ತೇರ್ಗಡೆಯಾಗಿರಬೇಕು.
ವಯೋಮಿತಿ :
ಐಟಿಐ ಅಲ್ಲದವರಿಗೆ ವಯಸ್ಸಿನ ಮಿತಿ 15 ವರ್ಷದಿಂದ 22 ವರ್ಷಗಳು.
ಐಟಿಐ ಸೀಟುಗಳಿಗೆ – 15 ವರ್ಷದಿಂದ 24 ವರ್ಷಗಳು.
ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಯಾವುದೇ ವೇಯ್ಟೇಜ್ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆಯ್ಕೆ ಹೇಗೆ ?
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. 10ನೇ ತರಗತಿಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.