ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರೈಲು ನಿಲ್ದಾಣದಲ್ಲಿದ್ದ ಬಡ ವ್ಯಕ್ತಿಯನ್ನು ಪೊಲೀಸ್ ಪೇದೆ ಮನಬಂದಂತೆ ಕಾಲಿನಿಂದ ಒದ್ದು ದರದರನೆ ಎಳೆದೊಯ್ದಿದ್ದಾನೆ.
ಈ ದೃಶ್ಯವನ್ನು ಇದೇ ರೈಲು ನಿಲ್ದಾಣದಲ್ಲಿದ್ದ ಮತ್ತೊಂದು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈ ಘಟನೆ ಯಾವ ರೈಲು ನಿಲ್ದಾಣದಲ್ಲಿ ನಡೆದಿದೆ ಎಂಬುದು ಬಹಿರಂಗವಾಗಿಲ್ಲ.
ವಿಡಿಯೋ ವೀಕ್ಷಿಸಿರುವ ನೆಟ್ಟಿಗರು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದು, ಇಂತಹ ದುರ್ವರ್ತನೆ ತೋರಿದ ಪೊಲೀಸ್ ಪೇದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.