ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಮೂರು ರೈಲುಗಳ ಡಿಕ್ಕಿಯಲ್ಲಿ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಬದಲಾವಣೆಯಿಂದ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಅಪಘಾತದ ಮೂಲ ಕಾರಣ ಗುರುತಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರೈಲು ಅಪಘಾತ ದುರಂತಕ್ಕೆ ಚಾಲಕನ ದೋಷ ಮತ್ತು ಸಿಸ್ಟಮ್ ಅಸಮರ್ಪಕ ಕಾರ್ಯವನ್ನು ರೈಲ್ವೆ ಇಲಾಖೆ ತಳ್ಳಿಹಾಕಿದೆ.
ಸಿಗ್ನಲಿಂಗ್ ಇಂಟರ್ ಫರೆನ್ಸ್ ದಿಂದಾಗಿ ಕೋರಮಂಡಲ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಯಿತು ಮತ್ತು ಅದರ ಎಂಜಿನ್ ಮತ್ತು ಕೋಚ್ ಲೂಪ್ ಲೈನ್‌ನಲ್ಲಿ ನಿಂತಿದ್ದ ಕಬ್ಬಿಣದ ಅದಿರು ತುಂಬಿದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಹೇಳಿದೆ.