ನವದೆಹಲಿ: ಎಲ್ಲಾ ವರ್ಗದ ಪ್ರಯಾಣಿಕರಿಗೆ ರೈಲ್ವೆಯು ಪ್ರತಿ ಟಿಕೆಟ್ ಮೇಲೆ ಶೇಕಡ 46 ರಷ್ಟು ರಿಯಾಯಿತಿ ನೀಡುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ರೈಲ್ವೆ ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಪ್ರತಿ 100 ರೂಪಾಯಿ ರೈಲ್ವೆ ಟಿಕೆಟ್ ಗೆ 46 ರೂ. ರಿಯಾಯಿತಿ ನೀಡುತ್ತಿದ್ದು, ಇದರೊಂದಿಗೆ ಪ್ರತಿ ವರ್ಷ ಒಟ್ಟು 56,993 ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಒಂದು ಟಿಕೆಟ್ ದರ 100 ರೂ. ಇದ್ದರೆ ರೈಲ್ವೆ ಶೇಕಡ 46 ರಷ್ಟು ರಿಯಾಯಿತಿಯೊಂದಿಗೆ ಕೇವಲ 56 ರೂಪಾಯಿ ಮಾತ್ರ ವಿಧಿಸುತ್ತದೆ ಎಂದು ಹೇಳಿದ್ದಾರೆ.
ಎಸಿ1, ಎಸಿ2, ಎಸಿ3 ಗಿಂತ ಜನರಲ್ ಬೋಗಿ ಹೆಚ್ಚಿಸಲಾಗುವುದು. 1000 ಜನರಲ್ ಬೋಗಿಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.