ಸರ್ಕಾರಿ ಕೆಲಸ ಪಡೆಯುವುದು ಅನೇಕರ ಕನಸು. ಸರ್ಕಾರಿ ಕೆಲಸ ಎಂದಾಗ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯಲು ಅನೇಕರು ಇಷ್ಟಪಡ್ತಾರೆ. ಈ ಕ್ಷೇತ್ರದಲ್ಲಿ ಸರ್ಕಾರಿ ಕೆಲಸವನ್ನು ಪಡೆಯಲು, ಅಭ್ಯರ್ಥಿಯು ವಿಶೇಷ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಂತರ ಆಯ್ಕೆ ಮತ್ತು ಸಂಬಳದಂತಹ ವಿಷಯಗಳನ್ನು ಗ್ರೇಡ್ ಮತ್ತು ಮೆರಿಟ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ರೈಲ್ವೇಸ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇದಕ್ಕಾಗಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ಪರೀಕ್ಷೆಯನ್ನು ನಡೆಸುತ್ತದೆ. ವಿದ್ಯಾರ್ಹತೆಯ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗವನ್ನು ಪಡೆಯಬಹುದು. ಇದರಲ್ಲಿ ಉದ್ಯೋಗವನ್ನು ಎ, ಬಿ, ಸಿ ಮತ್ತು ಡಿ ಗುಂಪಿನ ಅಡಿಯಲ್ಲಿ ವಿಂಗಡಿಸಲಾಗಿದೆ. ಇವುಗಳಲ್ಲಿ, ಅಧಿಕಾರಿ ಶ್ರೇಣಿಗಳನ್ನು ಗುಂಪು ಎ ಮತ್ತು ಬಿ ನಲ್ಲಿ ನೇಮಿಸಲಾಗುತ್ತದೆ.
ರೈಲ್ವೇಯಲ್ಲಿ ಗ್ರೂಪ್ ಎಗೆ ನೇಮಕಾತಿಯನ್ನು ಯುಪಿಎಸ್ಸಿ ಪರೀಕ್ಷೆ ಮೂಲಕ ಮಾಡಲಾಗುತ್ತದೆ. ನಾಗರಿಕ ಸೇವಾ ಪರೀಕ್ಷೆ, ಎಂಜಿನಿಯರಿಂಗ್ ಸೇವಾ ಪರೀಕ್ಷೆ ಅಥವಾ ಸಂಯೋಜಿತ ವೈದ್ಯಕೀಯ ಪರೀಕ್ಷೆಯನ್ನು ನೀಡಬೇಕು. ಗ್ರೂಪ್ ಎಗೆ ಅರ್ಜಿ ಸಲ್ಲಿಸಲು ಇಂಜಿನಿಯರಿಂಗ್, ಎಂಬಿಬಿಎಸ್ ಅಥವಾ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿದೆ.
ಗ್ರೂಪ್ ಬಿಯಲ್ಲಿ ಬರುವ ಹುದ್ದೆಗೆ ಪ್ರತ್ಯೇಕ ನೇಮಕಾತಿ ನಡೆಯುವುದಿಲ್ಲ. ಸಿ ಗುಂಪಿನಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಮಾತ್ರ ಬಿ ಗುಂಪಿಗೆ ಬಡ್ತಿ ನೀಡಲಾಗುತ್ತದೆ.
ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳು ನಾನ್-ಗೆಜೆಟೆಡ್ ಅಧೀನ ಹುದ್ದೆಗಳ ಅಡಿಯಲ್ಲಿ ಬರುತ್ತವೆ. ಈ ಪೋಸ್ಟ್ ಗಾಗಿ, ಅಭ್ಯರ್ಥಿಯು 12 ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರೂಪ್ ಸಿ ಸ್ಟೇಷನ್ ಮಾಸ್ಟರ್, ಟಿಕೆಟ್ ಕಲೆಕ್ಟರ್, ಗಾರ್ಡ್, ಟ್ರಾಫಿಕ್ ಅಪ್ರೆಂಟಿಸ್ ಮುಂತಾದ ಹುದ್ದೆಗಳನ್ನು ಹೊಂದಿದೆ. ಗ್ರೂಪ್ ಸಿ ನೇಮಕಾತಿಯನ್ನು ರೈಲ್ವೇ ನೇಮಕಾತಿ ಮಂಡಳಿ ಮೂಲಕ ಮಾಡಲಾಗುತ್ತದೆ.