alex Certify ಸಿಡಿ ಪ್ರಕರಣ: ಯುವತಿಗೆ ಹಣ ಕೊಟ್ಟಿದ್ದ ಉದ್ಯಮಿ ಶಿವಕುಮಾರ್ ಮನೆ ಮೇಲೆ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣ: ಯುವತಿಗೆ ಹಣ ಕೊಟ್ಟಿದ್ದ ಉದ್ಯಮಿ ಶಿವಕುಮಾರ್ ಮನೆ ಮೇಲೆ ದಾಳಿ

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ಎಸ್ಐಟಿ ಅಧಿಕಾರಿಗಳು ಉದ್ಯಮಿ ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ.

ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತರಿಗೆ ಉದ್ಯಮಿ ಶಿವಕುಮಾರ್ ಹಣ ನೀಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಜೆಪಿನಗರದ ಕೊತ್ತನೂರು ದಿಣ್ಣೆಯಲ್ಲಿರುವ ಶಿವಕುಮಾರ್ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನರೇಶ್ ಜೊತೆಗೆ ಮೂರು ತಿಂಗಳಿನಿಂದ ಶಿವಕುಮಾರ್ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಅಲ್ಲದೆ ಯುವತಿಗೆ ಹಣ ನೀಡಿರುವ ಸುಳಿವು ಪತ್ತೆಯಾಗಿದೆ. ಮಾರ್ಚ್ 10 ರಂದು ಎರ್ನಾಕುಲಂನಲ್ಲಿ ಮೊಬೈಲ್ ಸ್ವಿಚ್ಆಫ್ ಆಗಿದ್ದು ಕಳೆದ 10 ದಿನಗಳಿಂದ ಶಿವಕುಮಾರ್ ತಲೆಮರೆಸಿಕೊಂಡಿದ್ದಾರೆ. ಹೊಸ ನಂಬರ್ ನಿಂದ ಶಿವಕುಮಾರ್ ಪತ್ನಿಗೆ ಕರೆ ಮಾಡಿದ್ದಾರೆ ಎನ್ನಲಾಗಿದ್ದು, ಅವರ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...