alex Certify ಕೆಲಸ ಕೊಡಿಸುವುದಾಗಿ ಯುವತಿಯ ಕರೆತಂದು ವೇಶ್ಯಾವಾಟಿಕೆ: ಮನೆ ಮೇಲೆ ಪೊಲೀಸರ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕೊಡಿಸುವುದಾಗಿ ಯುವತಿಯ ಕರೆತಂದು ವೇಶ್ಯಾವಾಟಿಕೆ: ಮನೆ ಮೇಲೆ ಪೊಲೀಸರ ದಾಳಿ

ಉಡುಪಿ: ಉಡುಪಿಯ ಶಾರದಾ ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಉಡುಪಿ ಮಹಿಳಾ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಓರ್ವ ಯುವತಿಯನ್ನು ರಕ್ಷಿಸಿದ್ದಾರೆ.

ಮೂಡಬಿದ್ರೆಯಿಂದ ಕೆಲಸ ಕೊಡಿಸುವುದಾಗಿ ಯುವತಿಯನ್ನು ಕರೆದುಕೊಂಡು ಬಂದಿದ್ದ ಸತೀಶ್ ಎಂಬಾತ ಶಾರದಾ ನಗರದ ಶ್ರೀಲತಾ ಅವರ ಮನೆಗೆ ಕಳುಹಿಸಿದ್ದ. ಆ ಯುವತಿಯನ್ನು ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಶ್ರೀಲತಾ ಒತ್ತಾಯ ಮಾಡಿ ರೂಮ್ ನಲ್ಲಿ ಇರಿಸಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಯುವತಿ ರಕ್ಷಿಸಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...