
ಶಿವಮೊಗ್ಗ: ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ನೀರೇರಿ ಗ್ರಾಮದ ಅಕೇಶಿಯಾ ಪ್ಲಾಂಟೇಷನ್ ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.
ಹಣ, ಕೋಳಿ ಹುಂಜಗಳನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು 11,170 ರೂ. ಹಣವನ್ನು ವಶಕ್ಕೆ ಪಡೆದು, 8 ಮಂದಿ ಆರೋಪಿಗಳ ಸಹಿತ ನಾಲ್ಕು ಕೋಳಿ ಹುಂಜ, ಎರಡು ಕತ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಹುಂಜಗಳ ಕಾಳಗ ನಡೆಸಿ ಬಾಜಿ ಕಟ್ಟಿಸಿಕೊಂಡು ಜೂಜು ನಡೆಸಲಾಗುತ್ತಿತ್ತು. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.