ರಾಯಚೂರು: ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ಮಗ ಬಳಿಕ ಪೊಲೀಸರಿಗೆ ತಾನೇ ಕರೆ ಮಾಡಿ ಮಾಹಿತಿ ನೀಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪೂರಿನಲ್ಲಿ ನಡೆದಿದೆ.
ತಂದೆ ಬಂಡಿತಿಮ್ಮಣ್ಣ (55) ಕೊಲೆಯಾದ ವ್ಯಕ್ತಿ. ಶೀಲವಂತ ತಂದೆಯನ್ನು ಕೊಲೆಗೈದ ಮಗ. ತಂದೆ ಬಂಡಿತಿಮ್ಮಣ್ಣ ಪ್ರತಿದಿನ ಗಾಂಜಾ, ಮಧ್ಯ ಸೇವಿಸಿಕೊಂಡು ಬಂದು ತಾಯಿಗೆ ಕಿರುಕುಳ, ಹಿಂಸೆ ನೀಡುವುದು ಮಾಡುತ್ತಿದ್ದನಂತೆ. ತಾಯಿಗೆ ಕೊಡುತ್ತಿದ್ದ ಹಿಂಸೆ ನೋಡಲಾಗದೇ ಮಗ ತಂದೆಯನ್ನೇ ಕೊಲೆ ಮಾಡಿದ್ದಾನೆ.
ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.