ರಾಯಚೂರು: ನರೇಗಾ ಕಾಮಗಾರಿಯಲ್ಲಿ 100 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯ್ತಿಗಳಲ್ಲಿ ಈ ಭ್ರಷ್ಟಾಚಾರ ನಡೆದಿದೆ.
ಪ್ರಕರಣ ಸಂಬಂಧ ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ದೇವದುರ್ಗ ತಾಲೂಕಿನ ನಾಲ್ವರು ಪಿಡಿಓಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜಾಲಹಳ್ಳಿ ಪಂಚಾಯಿತಿ ಪಿಡಿಓ ಪತ್ಯಪ್ಪ ರಾಠೋಡ್, ಶಾವಂತಗೆರಾ ಪಂಚಾಯಿತಿ ಪಿಡಿಓ ಗುರುಸ್ವಾಮಿ, ಕ್ಯಾದಿಗೇರಾ ಪಂಚಾಯಿತಿ ಪಿಡಿಓ ಸಿ.ಬಿ.ಪಾಟೀಲ್, ಗಾಣದಾಳ ಪಿಡಿಓ ಮಲ್ಲಪ್ಪ ಅಮಾನತುಗೊಂಡವರು.
ಇನ್ನು 33 ಗ್ರಾಮ ಪಂಚಾಯತ್ ನಲ್ಲಿ ನರೇಗಾ ಕಾಮಗಾರಿಯಲ್ಲಿ ಇನ್ನೂ ಹಲವು ಅಧಿಕಾರಿಗಳು, ಪಿಡಿಓ ಗಳು, ಜನಪ್ರತಿನಿಧಿಗಳು ಕೂಡ ಭಾಗಿಯಾಗಿರುವ ಆರೋಪವಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.